ಅತ್ಯಾಚಾರ ಆರೋಪಿಯ ವಿರುದ್ಧ ಕೊಲೆ ಆರೋಪ ರೂಪಿಸಲು ದಿಲ್ಲಿ ಉಚ್ಚ ನ್ಯಾಯಾಲಯದ ಆದೇಶ

Update: 2017-10-22 12:42 GMT

ಹೊಸದಿಲ್ಲಿ,ಅ.22: ಅತ್ಯಾಚಾರ ಪ್ರಕರಣವೊಂದರಲ್ಲಿ ವಿಚಾರಣಾ ನ್ಯಾಯಾಲಯದ ಆದೇಶವನ್ನು ತಳ್ಳಿಹಾಕಿರುವ ದಿಲ್ಲಿ ಉಚ್ಚ ನ್ಯಾಯಾಲಯವು, ಮಹಿಳೆಯೋರ್ವಳ ಮೇಲೆ ಅತ್ಯಾಚಾರವೆಸಗಿದ ಬಳಿಕ ಆಕೆಯ ಗುಪ್ತಾಂಗದಲ್ಲಿ ಕೋಲೊಂದನ್ನು ತೂರಿಸಿ ಆಕೆಯ ಸಾವಿಗೆ ಕಾರಣನಾಗಿದ್ದ ಆರೋಪಿಯ ವಿರುದ್ಧ ಕೊಲೆ ಆರೋಪವನ್ನು ರೂಪಿಸುವಂತೆ ಆದೇಶಿಸಿದೆ.

 ಆರೋಪಿಯ ವಿರುದ್ಧ ಕೊಲೆ ಆರೋಪವನ್ನು ರೂಪಿಸದಿರುವ ಸೆಷನ್ಸ್ ನ್ಯಾಯಾಲಯದ ‘ತಿಕ್ಕಲು,ಅಕ್ರಮ ಮತ್ತು ಮೊಂಡ’ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನ್ಯಾ.ವಿನೋದ ಗೋಯೆಲ್ ಅವರು, ನ್ಯಾಯಿಕ ದೃಷ್ಟಿಕೋನವನ್ನು ಇಲ್ಲಿ ಅನ್ವಯಿಸಲಾಗಿಲ್ಲ ಎನ್ನುವುದನ್ನು ಇದು ತೋರಿಸುತ್ತಿದೆ ಎಂದು ಹೇಳಿದರು.

 ಸೆಷನ್ಸ್ ನ್ಯಾಯಾಧೀಶರು ಘೋರ ತಪ್ಪನ್ನೆಸಗಿದ್ದಾರೆ ಮತ್ತು ಇದು ನ್ಯಾಯದ ವೈಫಲ್ಯಕ್ಕೆ ಕಾರಣವಾಗಿದೆ ಎಂದು ಹೇಳಿರುವ ಉಚ್ಚ ನ್ಯಾಯಾಲಯವು, ಗರಿಷ್ಠ ಮರಣ ದಂಡನೆಯನ್ನು ವಿಧಿಸಬಹುದಾದ ಐಪಿಸಿ 302ರಡಿ ಆರೋಪಿಯ ವಿರುದ್ಧ ಹೆಚ್ಚುವರಿ ಯಾಗಿ ಕೊಲೆ ಆರೋಪವನ್ನು ರೂಪಿಸುವಂತೆ ಪ್ರಾಸಿಕ್ಯೂಷನ್ ಮಾಡಿಕೊಂಡಿದ್ದ ಮನವಿಯನ್ನು ನಿರಾಕರಿಸಿದ್ದ ವಿಚಾರಣಾ ನ್ಯಾಯಾಲಯದ 2106,ಆ.29ರ ಆದೇಶವನ್ನು ತಳ್ಳಿಹಾಕಿದೆ.

ಆರೋಪಿಯ ವಿರುದ್ಧ ಕೊಲೆ ಆರೋಪವನ್ನು ರೂಪಿಸುವಂತೆ ಮತ್ತು ದೈನಂದಿನ ವಿಚಾರಣೆಯ ಆಧಾರದಲ್ಲಿ ಮೂರು ತಿಂಗಳೊಳಗೆ ವಿಚಾರಣೆಯನ್ನು ಪೂರ್ಣಗೊಳಿಸು ವಂತೆ ಅದು ಸೆಷನ್ಸ್ ನ್ಯಾಯಾಧೀಶರಿಗೆ ನಿರ್ದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News