ರಾಜ್ಯ ಮಹಿಳಾ ಆಯೋಗಗಳು ನಿಜಕ್ಕೂ ಅಸ್ತಿತ್ವದಲ್ಲಿವೆಯೇ?: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

Update: 2017-10-22 13:45 GMT

ಹೊಸದಿಲ್ಲಿ,ಅ.22: ರಾಜ್ಯ ಮಹಿಳಾ ಆಯೋಗಗಳು ನಿಜಕ್ಕೂ ದೇಶಾದ್ಯಂತ ಅಸ್ತಿತ್ವದಲ್ಲಿವೆಯೇ ಎಂದು ಸರ್ವೋಚ್ಚ ನ್ಯಾಯಾಲಯವು ಕೇಂದ್ರವನ್ನು ಪ್ರಶ್ನಿಸಿದೆ.

ವೃಂದಾವನ ಮತ್ತು ದೇಶದ ಇತರ ಸ್ಥಳಗಳಲ್ಲಿಯ ಆಶ್ರಯ ತಾಣಗಳಲ್ಲಿ ವಾಸವಿರುವ ವಿಧವೆಯರ ಅತಂತ್ರ ಸ್ಥಿತಿಗೆ ಸಂಬಂಧಿಸಿದ ವಿಷಯದ ವಿಚಾರಣೆಯನ್ನು ನಡೆಸುತ್ತಿದ್ದ ಸಂದರ್ಭ ಈ ಪ್ರಶ್ನೆಯನ್ನೆತ್ತಿದ ನ್ಯಾ.ಎಂ.ಬಿ.ಲೋಕೂರ್ ನೇತೃತ್ವದ ಪೀಠವು, ರಾಜ್ಯಗಳಲ್ಲಿ ಮಹಿಳಾ ಆಯೋಗಗಳು ಅಸ್ತಿತ್ವದಲ್ಲಿಲ್ಲದಿದ್ದರೆ ಅಂತಹ ಆಯೋಗಗಳನ್ನು ಸ್ಥಾಪಿಸುವಂತೆ ಸಂಬಂಧಿಸಿದ ರಾಜ್ಯಗಳಿಗೆ ಸೂಚಿಸುವಂತೆ ಕೇಂದ್ರಕ್ಕೆ ನಿರ್ದೇಶ ನೀಡಿದೆ.

ಪರಿತ್ಯಕ್ತ ವಿಧವೆಯರ ಸ್ಥಿತಿಗತಿಯ ಸುಧಾರಣೆಗಾಗಿ ತೆಗೆದುಕೊಳ್ಳಬೇಕಾಗಿರುವ ಹಲವಾರು ಕ್ರಮಗಳನ್ನು ಒಳಗೊಂಡಿರುವ ಕ್ರಿಯಾ ಯೋಜನೆಯೊಂದನ್ನು ಸರಕಾರವು ಒಪ್ಪಿಕೊಂಡಿದ್ದು, ಈ ಕುರಿತು ಪ್ರಮಾಣಪತ್ರವನ್ನು ತಾನು ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಕೇಂದ್ರವು ನಿವೇದಿಸಿಕೊಂಡಿದೆ.

ಆರು ತಿಂಗಳೊಳಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರಕ್ಕೆ ಸೂಚಿಸಿರುವ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಡಿ.6ಕ್ಕೆ ನಿಗದಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News