ಸ್ಪೇನ್, ಬ್ರೆಝಿಲ್ ಸೆಮಿಫೈನಲ್ ಗೆ ತೇರ್ಗಡೆ

Update: 2017-10-22 18:20 GMT

ಕೊಚ್ಚಿ, ಅ.22: ಇರಾನ್ ವಿರುದ್ಧ ಭರ್ಜರಿ ಜಯ ಸಾಧಿಸಿರುವ ಸ್ಪೇನ್ ತಂಡ ಫಿಫಾ ಅಂಡರ್-17 ವಿಶ್ವಕಪ್‌ನಲ್ಲಿ ಸೆಮಿ ಫೈನಲ್‌ಗೆ ಪ್ರವೇಶಿಸಿದೆ.

ರವಿವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಪೇನ್ ತಂಡ ಇರಾನ್ ತಂಡವನ್ನು 3-1 ಗೋಲುಗಳ ಅಂತರದಿಂದ ಮಣಿಸಿತು. ಯುರೋಪಿಯನ್ ಚಾಂಪಿಯನ್ ಸ್ಪೇನ್ 13ನೆ ನಿಮಿಷದಲ್ಲಿ ಗೋಲು ಖಾತೆ ತೆರೆಯುವ ಮೂಲಕ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿತು. ಅಬೆಲ್ ರುಯಿಝ್ ಸ್ಪೇನ್‌ಗೆ 1-0 ಮುನ್ನಡೆ ಒದಗಿಸಿಕೊಟ್ಟರು. ಸೆರ್ಜಿಯೊ ಗೊಮೆಝ್ 60ನೆ ನಿಮಿಷದಲ್ಲಿ ಫೆರ್ರಾನ್ ಟೊರ್ರೆಸ್ ನೀಡಿದ ಪಾಸ್ ನೆರವಿನಿಂದ ಆಕರ್ಷಕ ಗೋಲು ಬಾರಿಸಿ ಸ್ಪೇನ್‌ಗೆ 2-0 ಮುನ್ನಡೆ ಒದಗಿಸಿಕೊಟ್ಟರು. ಫೆರ್ರಾನ್ ಟೊರ್ರೆಸ್ 67ನೆ ನಿಮಿಷದಲ್ಲಿ ಗೋಲು ಬಾರಿಸುವುದರೊಂದಿಗೆ ಸ್ಪೇನ್ ಮುನ್ನಡೆಯನ್ನು 3-0ಗೆ ವಿಸ್ತರಿಸಿದರು.

69ನೆ ನಿಮಿಷದಲ್ಲಿ ಸಯೀದ್ ಕರೀಮ್ ಇರಾನ್ ಪರ ಸಮಾಧಾನಕರ ಗೋಲು ಬಾರಿಸಿದರು.

ಕೊನೆಯ ತನಕ 3-1 ಮುನ್ನಡೆ ಕಾಯ್ದುಕೊಂಡಿರುವ ಸ್ಪೇನ್ ತಂಡ ಅಂತಿಮ-4ರ ಹಂತ ತಲುಪಿದ್ದು, ಬುಧವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ 2015ರ ರನ್ನರ್ಸ್-ಅಪ್, ಆಫ್ರಿಕನ್ ಚಾಂಪಿಯನ್ ಮಾಲಿ ತಂಡವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News