×
Ad

ಬ್ರೆಝಿಲ್ ಸೆಮಿಫೈನಲ್‌ಗೆ

Update: 2017-10-22 23:51 IST

ಕೋಲ್ಕತಾ, ಅ.22: ದ್ವಿತೀಯಾರ್ಧದಲ್ಲಿ ಎರಡು ಗೋಲು ಬಾರಿಸಿ ಜರ್ಮನಿಗೆ ತಿರುಗೇಟು ನೀಡಿದ ಬ್ರೆಝಿಲ್ ತಂಡ ಫಿಫಾ ಅಂಡರ್-17 ವಿಶ್ವಕಪ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ಪ್ರವೇಶಿಸಿದೆ.

 ರವಿವಾರ ವಿವೇಕಾನಂದ ಭಾರತಿ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಬ್ರೆಝಿಲ್ 2-1 ಅಂತರದಿಂದ ಜಯ ಸಾಧಿಸಿತು. 21ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಬಾರಿಸಿದ ನಾಯಕ ಜಾನ್ ಫಿಯೆಟ್ ಅರ್ಪ್ ಜರ್ಮನಿಗೆ 1-0 ಮುನ್ನಡೆ ಒದಗಿಸಿಕೊಟ್ಟಿದ್ದರು. ದ್ವಿತೀಯಾರ್ಧದ 71ನೆ ನಿಮಿಷದಲ್ಲಿ ಬ್ರೆಝಿಲ್‌ನ ಬದಲಿ ಆಟಗಾರ ವೆವರ್ಸನ್ ಗೋಲು ಬಾರಿಸಿ 1-1 ರಿಂದ ಸಮಬಲಗೊಳಿಸಿದರು. ಕೋಲ್ಕತಾ ಪ್ರೇಕ್ಷಕರ ಬೆಂಬಲದಿಂದ 77ನೆ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದ ಬ್ರೆಝಿಲ್ ಸೆಮಿಫೈನಲ್ ಟಿಕೆಟ್ ಗಿಟ್ಟಿಸಿಕೊಂಡಿತು. ಪೌಲಿನ್ಹೊ ಬ್ರೆಝಿಲ್‌ಗೆ ಪರ ನಿರ್ಣಾಯಕ ಗೋಲು ಬಾರಿಸಿದರು.

ಬ್ರೆಝಿಲ್ ಬುಧವಾರ ಗುವಾಹತಿಯಲ್ಲಿ ನಡೆಯಲಿರುವ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News