'ಸೆಲ್ಫಿ ವಿತ್ ಗೋಮಾತಾ': ಗೋಸೇವಾ ಪರಿವಾರ್ ನಿಂದ ಹೊಸ ಸ್ಪರ್ಧೆ!
Update: 2017-10-28 20:38 IST
ಕೊಲ್ಕತಾ, ಅ.28: ಗೋವಿನ ಮಹತ್ವವನ್ನು ಪ್ರಚಾರ ಮಾಡಲು ಹೊಸ ಮೊಬೈಲ್ ಆ್ಯಪ್ ಒಂದನ್ನು ಗೋಸೇವಾ ಪರಿವಾರ್ ಎಂಬ ಸಂಘಟನೆಯೊಂದು ಹೊರತಂದಿದ್ದು, ಈ ಆ್ಯಪ್ ಮೂಲಕ ಬಳಕೆದಾರರು ಗೋವಿನೊಂದಿಗೆ ಸೆಲ್ಫಿ ತೆಗೆದು ಬಹುಮಾನ ಗೆಲ್ಲಬಹುದು ಎನ್ನಲಾಗಿದೆ.
ಗೋಸೇವಾ ಪರಿವಾರ್ ಆಯೋಜಿಸುವ 'ಸೆಲ್ಫಿ ವಿತ್ ಗೋಮಾತಾ' ಸ್ಪರ್ಧೆಗೆ ಹೆಚ್ಚು ಜನರನ್ನು ಆಕರ್ಷಿಸಲು ಹಾಗು ಸ್ಪರ್ಧಿಗಳ ಅನುಕೂಲತೆಗಾಗಿ ಈ ಹೊಸ ಆ್ಯಪ್ ಅನ್ನು ಹೊರತರಲಾಗಿದೆ ಎಂದು ಗೋಸೇವಾ ಪರಿವಾರ್ ಕಾರ್ಯಕರ್ತರು ತಿಳಿಸಿದ್ದಾರೆ ಎಂದು scroll.in ವರದಿ ಮಾಡಿದೆ.
"ಈ ಆ್ಯಪ್ ಮೂಲಕ ಗೋವಿನ ಮಹತ್ವ, ಪ್ರಯೋಜನಗಳನ್ನು ಪ್ರಚಾರ ಮಾಡುವ ಯೋಜನೆ ಇದೆ. ಗೋವನ್ನು ಉಪಚರಿಸುವುದೆಂದರೆ ಇಡೀ ಮಾನವ ಕುಲವನ್ನೇ ಉಪಚರಿಸಿದಂತೆ ಎನ್ನುವ ಸಂದೇಶವನ್ನು ಇದರ ಮೂಲಕ ನೀಡಲಾಗುವುದು. ಸ್ಪರ್ಧೆಯೊಂದಿಗೆ ನೇರ ಸಂಬಂಧವಿಲ್ಲದಿದ್ದರೂ ನಾವು ಈ ಆಶಯವನ್ನು ಬೆಂಬಲಿಸುತ್ತೇವೆ" ಎಂದು ಆರೆಸ್ಸೆಸ್ ನ ಹಿರಿಯ ನಾಯಕರೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.