ಗುರುಗ್ರಾಮ್‌ನಲ್ಲಿ ಲಕ್ಸುರಿ ಹೌಸಿಂಗ್ ಪ್ರಾಜೆಕ್ಟ್ ; ಶರಪೋವಾ ವಿರುದ್ಧ ಎಫ್‌ಐಆರ್

Update: 2017-11-03 18:26 GMT

 ಹೊಸದಿಲ್ಲಿ, ನ.3: ವಿಶ್ವದ ಮಾಜಿ ನಂ.1 ತಾರೆ ರಷ್ಯಾದ ಮರಿಯಾ ಶರಪೋವಾ ಅವರು ಗುರುಗ್ರಾಮ್‌ನಲ್ಲಿ ಲಕ್ಸುರಿ ಹೌಸಿಂಗ್ ಪ್ರಾಜೆಕ್ಟ್‌ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಮಸ್ಯೆಯಲ್ಲಿ ಸಿಲುಕೊಂಡಿದ್ದಾರೆ.

 ಗುರುಗ್ರಾಮದಲ್ಲಿ ‘ಬ್ಯಾಲೆಟ್ ಬೈ ಶರಪೋವಾ’ ಎಂಬ ಹೆಸರಿನ ವಸತಿ ಸಮುಚ್ಛಯವೊಂದರ ಮನೆ ಖರೀದಿದಾರರು ಸಲ್ಲಿಸಿದ ದೂರಿನಂತೆ ಎಫ್‌ಐಆರ್ ದಾಖಲಿಸುವಂತೆ ದಿಲ್ಲಿ ನ್ಯಾಯಾಲಯವು ಪೊಲೀಸರಿಗೆ ಆದೇಶ ನೀಡಿದೆ.

 ವಾಯುವ್ಯ ದಿಲ್ಲಿ ಮೆಟ್ರೋಪಾಲಿಟನ್ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ರಾಜೇಶ್ ಮಲಿಕ್ ಅವರು ಮರಿಯಾ ಶರಪೋವಾ, ಹೋಮ್‌ಸ್ಟೆಡ್ ಇನ್‌ಫ್ರಾಸ್ಟ್ರೆಕ್ಚರ್ ಡೆವಲಪ್‌ಮೆಂಟ್ ಪ್ರೈವೆಟ್ ಲಿಮಿಟೆಡ್, ಹೋಮ್‌ಸ್ಟೆಡ್ ಇನ್‌ಫ್ರಾಸ್ಟ್ರೆಕ್ಚರ್ ಮೇಂಟೆನೆನ್ಸ್ ಪ್ರೈವೆಟ್ ಲಿಮಿಟೆಡ್‌ಮತ್ತು ಹೋಮ್‌ಸ್ಟೆಡ್ ಅರಾಬಿಕ್ ಹೋಮ್ಸ್ ಪ್ರೈವೆಟ್ ಲಿಮಿಟೆಡ್ ಮತ್ತು ಇದರ ನಿರ್ದೇಶಕರ ವಿರುದ್ಧ ಎಫ್‌ಐಆರ್ ದಾಖಲಿಸಲು ನ್ಯಾಯಾಲಯ ಸೂಚಿಸಿದೆ ಎಂದು ‘ಟೈಮ್ಸ್ ಇಂಡಿಯಾ’ ವರದಿ ಮಾಡಿದೆ.
ಭಾವನಾ ಅಗರ್‌ವಾಲಾ ಎಂಬವರು ತಮ್ಮ ವಕೀಲರಾದ ಪಿಯೂಷ್ ಮೂಲಕ ಸಲ್ಲಿಸಿರುವ ದೂರಿನಲ್ಲಿ ಬಿಲ್ಡರ್ಸ್‌ಗಳು ಮನೆ ಖರೀದಿದಾರರನ್ನು ಆಕರ್ಷಿಸಲು ಮರಿಯಾ ಶರಪೋವಾ ಹೆಸರಲ್ಲಿ ಜಾಹೀರಾತು ನೀಡಿದ್ದರು ಎಂದು ಆರೋಪಿಸಿದ್ದಾರೆ.

  ಎ.14, 2013ರಲ್ಲಿ ಮಾಡಿಕೊಂಡ ಒಪ್ಪಂದದಂತೆ ಮೂರು ವರ್ಷಗಳಲ್ಲಿ ಖರೀದಿದಾರರಿಗೆ ಮನೆಯನ್ನು ಹಸ್ತಾಂತರಿಸಬೇಕಿತ್ತು. ಇದಕ್ಕಾಗಿ ಭಾವನಾ 53 ಲಕ್ಷ ರೂ. ನೀಡಿದ್ದರು. ಆದರೆ ಈ ವರೆಗೆ ಮನೆಯನ್ನು ನೀಡಲಾಗಿಲ್ಲ ಎಂದು ಅಗರವಾಲ್ ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News