ರಸ್ತೆ ಅಪಘಾತಗಳಿಗೆ ಕೊನೆ ಇಲ್ಲವೇ?

Update: 2017-11-05 18:29 GMT

ಮಾನ್ಯರೆ,

ಇತ್ತೀಚಿನ ಕೆಲವರ್ಷಗಳಲ್ಲಿ ರಸ್ತೆ ಅಪಘಾತಗಳಲ್ಲಿ ಮೃತಪಡುವವರ ಸಂಖ್ಯೆ ವಿಪರೀತವಾಗಿ ಏರುತ್ತಿದೆ. ಅದರಲ್ಲೂ ಆಘಾತಕಾರಿ ಅಂಶವೆಂದರೆ ಬಹುತೇಕ ಯುವಕರೇ ಇಂಥಾ ಅಪಘಾತಗಳಲ್ಲಿ ಸಾವನ್ನಪ್ಪುತ್ತಿರುವುದು.
 ಇದಕ್ಕೆ ಮುಖ್ಯ ಕಾರಣ ಆಡಳಿತ ವ್ಯವಸ್ಥೆಯಲ್ಲಿರುವ ಲೋಪದೋಷಗಳು. ಅಧಿಕಾರಿಗಳು ರಸ್ತೆಯನ್ನು ಮೇಲ್ದರ್ಜೆಗೇರಿಸುವಾಗ ತೋರಿಸುವ ಆಸಕ್ತಿ ಆ ರಸ್ತೆಗಳ ಮೇಲೆ ಸುರಕ್ಷಾ ಸಾಧನಗಳ ಅಳವಡಿಕೆಯ ವೇಳೆ ತೋರಿಸುವುದಿಲ್ಲ. ಇದರಿಂದಾಗಿ ಗೊಂದಲಗಳು ಉಂಟಾಗಿ ವಾಹನ ಸವಾರರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ.

ಮಂಗಳೂರು ನಗರ ಮತ್ತು ಸುತ್ತಮುತ್ತ ಎಲ್ಲಿ ನೋಡಿದರೂ ಕಾಂಕ್ರಿಟ್ ರಸ್ತೆಗಳೇ ಕಾಣಸಿಗುತ್ತವೆ. ಆದರೆ ಇವುಗಳಲ್ಲಿ ಅಳವಡಿಸಲಾಗಿರುವ ಸುರಕ್ಷಾ ಕ್ರಮಗಳನ್ನು ಗಮನಿಸಿದಾಗ ಬೇಸರವಾಗುತ್ತದೆ. ಸಪಾಟು ರಸ್ತೆಗಳಷ್ಟೇ ಇವೆ ಹೊರತು ಸರಿಯಾದ ವೃತ್ತವಾಗಲೀ, ಜೀಬ್ರಾ ಕ್ರಾಸ್‌ಗಳಾಗಲೀ, ಪಾದಚಾರಿಗಳ ಓಡಾಟಕ್ಕೆ ಫುಟ್‌ಪಾತ್ ಆಗಲೀ ಯಾವುದೂ ಇರುವುದಿಲ್ಲ. ಈಗಿನ ಯುವಕರು ರಸ್ತೆ ಸುರಕ್ಷತೆಯ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದಿಲ್ಲ ಜೊತೆಗೆ ದ್ವಿಚಕ್ರ ವಾಹನವನ್ನು ಆಕಾಶದಲ್ಲಿ ಚಲಾಯಿಸುವಂತೆ ಚಲಾಯಿಸುತ್ತಾರೆ. ಇದರಿಂದ ಅಪಘಾತಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಯುವಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಸೂಕ್ತ ತಿಳುವಳಿಕೆಯನ್ನು ನೀಡುವ ಕಾರ್ಯವನ್ನು ಸರಕಾರ ಮಾಡಬೇಕಿದೆ.

Writer - - ರಾಜೇಶ್ ಅಂಚನ್, ಮಂಗಳೂರು

contributor

Editor - - ರಾಜೇಶ್ ಅಂಚನ್, ಮಂಗಳೂರು

contributor

Similar News