ಸಂಜಯ್ ಲೀಲಾ ಬನ್ಸಾಲಿಗೆ ಪೊಲೀಸ್ ಭದ್ರತೆ
Update: 2017-11-15 19:05 IST
ಮುಂಬೈ, ನ.15: ಪದ್ಮಾವತಿ ಸಿನೆಮಾದ ಬಿಡುಗಡೆಗೂ ಮುನ್ನವೇ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಗೆ ಹೆಚ್ಚುತ್ತಿರುವ ಬೆದರಿಕೆಗಳನ್ನು ಪರಿಗಣಿಸಿ ಮಹಾರಾಷ್ಟ್ರ ಸರಕಾರ ಅವರಿಗೆ ಪೊಲೀಸ್ ಭದ್ರತೆ ಒದಗಿಸಿದೆ.
ಬನ್ಸಾಲಿಗೆ ಪೊಲೀಸ್ ಭದ್ರತೆ ಒದಗಿಸಿರುವುದಕ್ಕೆ ಭಾರತೀಯ ಚಲನಚಿತ್ರ ಮತ್ತು ಕಿರುತೆರೆ ನಿರ್ದೇಶಕರ ಸಂಘ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅರಿಗೆ ಕೃತಜ್ಞತೆಗಳನ್ನು ಸಲ್ಲಿಸಿದೆ.
ನಮ್ಮ ಸಂಘದ ಗೌರವಾನ್ವಿತ ಸದಸ್ಯರಾಗಿರುವ ಸಂಜಯ್ ಲೀಲಾ ಬನ್ಸಾಲಿಗೆ ಪೊಲೀಸ್ ಭದ್ರತೆ ಒದಗಿಸಿರುವ ಸರಕಾರಕ್ಕೆ ಧನ್ಯವಾದ ಸಲ್ಲಿಸಲು ನಮ್ಮಲ್ಲಿ ಶಬ್ದಗಳೇ ಇಲ್ಲ ಎಂದು ಚಿತ್ರನಿರ್ಮಾಪಕ ಅಶೋಕ್ ಪಂಡಿತ್ ತಿಳಿಸಿದ್ದಾರೆ.
ಬನ್ಸಾಲಿ ತಮ್ಮ ಚಿತ್ರವನ್ನು ಬಿಡುಗಡೆ ಮಾಡಲು ಸಹಾಯ ಮಾಡಬೇಕು ಎಂದು ನಾನು ಸರಕಾರವನ್ನು ಮನವಿ ಮಾಡಿರುವುದಾಗಿ ಪಂಡಿತ್ ತಿಳಿಸಿದ್ದಾರೆ.