ಧರ್ಮದ ಹೆಸರಲ್ಲಿ ದೇಶವನ್ನು ವಿಭಜಿಸುವುದನ್ನು ಇಂದಿರಾ ಗಾಂಧಿ ವಿರೋಧಿಸಿದ್ದರು: ಸೋನಿಯಾ ಗಾಂಧಿ

Update: 2017-11-19 14:00 GMT

ಹೊಸದಿಲ್ಲಿ, ನ.19: ಭಾರತದ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರು ಸದಾ ಜಾತ್ಯತೀತತೆಗಾಗಿ ಹೋರಾಡುತ್ತಿದ್ದರು. ದೇಶವನ್ನು ಧರ್ಮದ ಹೆಸರಲ್ಲಿ ವಿಭಜಿಸುವುದನ್ನು ಅವರು ವಿರೋಧಿಸಿದ್ದರು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದರು.

1, ಸಫ್ದರ್‌ಜಂಗ್ ರಸ್ತೆಯಲ್ಲಿರುವ ಇಂದಿರಾ ಗಾಂಧಿಯವರ ಅಧಿಕೃತ ನಿವಾಸದಲ್ಲಿ ದಿವಂಗತ ಪ್ರಧಾನಿಯ ಜನ್ಮಶತಾಬ್ದಿ ಆಚರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸೋನಿಯಾ ಗಾಂಧಿ ಈ ಮಾತುಗಳನ್ನು ಆಡಿದರು. ಈ ಸಂದರ್ಭದಲ್ಲಿ ಅವರ ಜೊತೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ಉಪಸ್ಥಿತರಿದ್ದರು.

ಇಂದಿರಾ ಗಾಂಧಿಯವರು ಭಾರತೀಯರನ್ನು ಧರ್ಮದ ಆಧಾರದಲ್ಲಿ ವಿಭಜಿಸಲು ಬಯಸಿದ್ದ ಜನರ ವಿರುದ್ಧ ನಿಂತು ಜಾತ್ಯತೀತತೆಯ ಪರವಾಗಿ ಹೋರಾಡಿದವರು. ಆಕೆ ಭಾರತದ ಶ್ರೀಮಂತ ವೈವಿಧ್ಯತೆ ಮತ್ತು ಅದರ ಶ್ರೇಷ್ಠ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ವೌಲ್ಯಗಳನ್ನು ಎತ್ತಿಹಿಡಿದರು ಎಂದು ಸೋನಿಯಾ ಗಾಂಧಿ ತಿಳಿಸಿದರು.

ಸಮಾಜದ ಎಲ್ಲಾ ವರ್ಗದ ಜನರಲ್ಲಿ ಸಮಾನತೆ ಮೂಡಿಸುವುದು ಆಕೆಯ ಪ್ರಮುಖ ಉದ್ದೇಶವಾಗಿತ್ತು. ಆಕೆಗೆ ಇದ್ದ ಧರ್ಮ ಒಂದೇ-ಎಲ್ಲಾ ಭಾರತೀಯರು ಒಂದೇ ತಾಯಿಯ ಮಕ್ಕಳು ಎಂಬುದು ಎಂದು ಸೋನಿಯಾ ನುಡಿದರು.

  ಈ ಸಂದರ್ಭದಲ್ಲಿ ಇಂದಿರಾ ಗಾಂಧಿ ಸ್ಮಾರಕ ಪ್ರತಿಷ್ಠಾನವು ದಿವಂಗತ ಪ್ರಧಾನಿಯ ಜೀವನವನ್ನಾಧರಿಸಿದ ಪ್ರದರ್ಶನ ೞಎ ಲೈಫ್ ಆಫ್ ಕರೇಜ್‌ೞಅನ್ನು ಆಯೋಜಿಸಿತ್ತು. ಇದೇ ವೇಳೆ ಪ್ರತಿಷ್ಠಾನವು 2004ರಿಂದ 2014ರ ವರೆಗೆ ದೇಶದ ಪ್ರಧಾನಿ ಸ್ಥಾನದಲ್ಲಿ ಕುಳಿತು ಶಾಂತಿ, ನಿರಸ್ತ್ರೀಕರಣ ಮತ್ತು ಅಭಿವೃದ್ಧಿ ಹಾಗೂ ಭಾರತದ ಪ್ರತಿಷ್ಠೆಯನ್ನು ಜಗತ್ತಿನ ದೃಷ್ಟಿಯಲ್ಲಿ ಉನ್ನತಮಟ್ಟಕ್ಕೆ ಏರಿಸಿದ ಮನ್‌ಮೋಹನ್ ಸಿಂಗ್‌ಗೆ ಇಂದಿರಾ ಗಾಂಧಿ ಪ್ರಶಸ್ತಿ ನೀಡಿ ಗೌರವಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News