ಆನ್‌ಲೈನ್ ವಂಚನೆಗೆ ಬಲಿಯಾದ ಸೇನಾಧಿಕಾರಿ
Update: 2017-11-20 19:33 IST
ಜಮ್ಮು,ನ.20: ಆನ್‌ಲೈನ್ ವಂಚನೆ ಪ್ರಕರಣವೊಂದರಲ್ಲಿ ಪಠಾಣಕೋಟ್‌ನ ಲೆಫ್ಟಿನಂಟ್ ಕರ್ನಲ್ ದರ್ಜೆಯ ಸೇನಾಧಿಕಾರಿಯೋರ್ವರ 12,000 ರೂ.ಗಳನ್ನು ಖದೀಮರು ಎಗರಿಸಿದ್ದಾರೆ.
ಪಸ್ತುತ ಜಮ್ಮುವಿನ ಪನಾಮಾ ಚೌಕ್ ಪ್ರದೇಶದಲ್ಲಿಯ ಪ್ರಯಾಣಿಕರ ತಂಗು ಶಿಬಿರವೊಂದರಲ್ಲಿ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿರುವ ಈ ಅಧಿಕಾರಿ ಆನ್‌ಲೈನ್ ಮೂಲಕ ತನ್ನ ಬ್ಯಾಂಕ್ ಖಾತೆಯಿಂದ ತಲಾ 6,000 ರೂ.ಗಳಂತೆ ಎರಡು ಬಾರಿ ಹಣವನ್ನು ದೋಚಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.