ಇಟಲಿ ಫುಟ್ಬಾಲ್ ದಂತಕತೆ ಬಫನ್‌ಗೆ ಶ್ರೇಷ್ಠ ಆಟಗಾರ ಪ್ರಶಸ್ತಿ

Update: 2017-11-28 18:03 GMT

 ಮಿಲಾನ್, ನ.28: ಇಟಲಿಯ ಫುಟ್ಬಾಲ್ ದಂತಕತೆ ಗಿಯಾನ್‌ಲುಗಿ ಬಫನ್ ಗ್ರಾನ್ ಗಾಲಾ ಡೆಲ್ ಕ್ಯಾಲ್ಸಿಯೊ ಅವಾರ್ಡ್ಸ್‌ನಲ್ಲಿ ‘ವರ್ಷದ ಶ್ರೇಷ್ಠ ಆಟಗಾರ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

‘‘2018ರ ವಿಶ್ವಕಪ್‌ಗೆ ಪಾಲ್ಗೊಳ್ಳಲು ವಿಫಲವಾಗಿರುವುದು ಹಾಗೂ ಚಾಂಪಿಯನ್ಸ್ ಲೀಗ್ ಫೈನಲ್ಸ್‌ನಲ್ಲಿ ಸೋತಿರುವುದು ನನ್ನ ವೃತ್ತಿಜೀವನದ ಅತ್ಯಂತ ದೊಡ್ಡ ವೈಫಲ್ಯವಾಗಿದೆ. ನಾನು ಈ ಟ್ರೋಫಿಯನ್ನು ಗೆಲ್ಲುತ್ತೇನೆಂದು ಯೋಚಿಸಿರಲಿಲ್ಲ. ಈ ಟ್ರೋಫಿ ನನಗೆ ಸಂತಸ ಹಾಗೂ ಹೆಮ್ಮೆ ತಂದಿದೆ’’ ಎಂದು 39ರ ಹರೆಯದ ಜುವೆಂಟಸ್ ಗೋಲ್‌ಕೀಪರ್ ಬಫನ್ ಸೋಮವಾರ ರಾತ್ರಿ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

 ನಾಲ್ಕು ಬಾರಿ ವಿಶ್ವ ಚಾಂಪಿಯನ್ ಆಗಿರುವ ಇಟಲಿ ತಂಡ ಕಳೆದ ತಿಂಗಳು ಸ್ವೀಡನ್ ವಿರುದ್ಧ ಪ್ಲೇ-ಆಫ್ ಪಂದ್ಯವನ್ನು ಸೋಲುವ ಮೂಲಕ 60 ವರ್ಷಗಳ ಬಳಿಕ ವಿಶ್ವಕಪ್‌ಗೆ ತೇರ್ಗಡೆಯಾಗಲು ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಬಫನ್ ಅಂತಾರಾಷ್ಟ್ರೀಯ ಫುಟ್ಬಾಲ್‌ನಿಂದ ದಿಢೀರನೇ ನಿವೃತ್ತಿ ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News