ಮಂಜುಹೊಗೆಯ ಕತ್ತಲಲ್ಲಿ ದಿಲ್ಲಿ: 8.3 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ ತಾಪಮಾನ

Update: 2017-12-04 14:46 GMT

ಹೊಸದಿಲ್ಲಿ, ಡಿ.4: ದಟ್ಟವಾದ ಮಂಜುಹೊಗೆ ನಗರವನ್ನು ಆವರಿಸಿದ ಪರಿಣಾಮ ಸೋಮವಾರದಂದು ದಿಲ್ಲಿಯ ಹಲವು ಕಡೆಗಳಲ್ಲಿ ಮಬ್ಬುಗತ್ತಲು ಆವರಿಸಿತು. ಜೊತೆಗೆ ತಾಪಮಾನ ಕೂಡಾ 8.3 ಡಿಗ್ರಿ ಸೆಲ್ಸಿಯಸ್ ತಲುಪಿದೆ.

ಮಂಜುಹೊಗೆಯ ಸಂದರ್ಭದಲ್ಲಿ 1000 ಮೀಟರ್‌ಗಿಂತ ಕೆಳಗಿನ ಮಟ್ಟದ ಗೋಚರತೆಯನ್ನು ಕಳಪೆ ಎಂದು ಪರಿಗಣಿಸಲಾಗುತ್ತದೆ. ಸೋಮವಾರ ಬೆಳಿಗ್ಗೆ ದಿಲ್ಲಿಯ ಸಫ್ದರ್‌ಗಂಜ್‌ನಲ್ಲಿ 700 ಮೀಟರ್ ಗೋಚರತೆಯಿದ್ದರೆ ಪಲಮ್ ನಿಲ್ದಾಣದಲ್ಲಿ 900ರಷ್ಟಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದೇ ವೇಳೆ ತಾಪಮಾನ ಕೂಡಾ 8.3 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದು ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News