ಮಹಾರಾಷ್ಟ್ರ ಮುಖ್ಯಮಂತ್ರಿಯನ್ನು ಮತ್ತೆ ಕಾಡಿದ ಹೆಲಿಕಾಪ್ಟರ್ ಭೀತಿ

Update: 2017-12-09 14:11 GMT

ಮುಂಬೈ,ಡಿ.9: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಶನಿವಾರ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಬಲವಂತ ಭೂಸ್ಪರ್ಶ ಮಾಡಿದ್ದು, ನಾಸಿಕ್‌ನಿಂದ ಔರಂಗಾಬಾದ್‌ಗೆ ಹಾರುತ್ತಿದ್ದ ಹೆಲಿಕಾಪ್ಟರ್ ಓವರ್‌ಲೋಡ್ ಆಗಿದ್ದು ಈ ಘಟನೆಗೆ ಕಾರಣವಾಗಿತ್ತು ಎನ್ನಲಾಗಿದೆ.

ಓರ್ವ ಪ್ರಯಾಣಿಕ ಮತ್ತು ಕೆಲವು ಲಗೇಜ್‌ಗಳನ್ನು ಇಳಿಸಿದ ಬಳಿಕ ಹೆಲಿಕಾಪ್ಟರ್ ತನ್ನ ಪ್ರಯಾಣವನ್ನು ಮುಂದುವರಿಸಿತು ಎಂದು ಪೊಲೀಸರು ತಿಳಿಸಿದರು.

ಇದು ಫಡ್ನವೀಸ್ ಅವರು ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿರುವಾಗಿನ ಇಂತಹ ಇತ್ತೀಚಿನ ಘಟನೆಯಾಗಿದೆ. ಜು.7ರಂದು ಮುಂಬೈ ಬಳಿಯ ಅಲಿಬಾಗ್‌ನಲ್ಲಿ ಫಡ್ನವೀಸ್ ಹೆಲಿಕಾಪ್ಟರ್ ಹತ್ತುವ ಮುನ್ನವೇ ಪೈಲಟ್ ಅದನ್ನು ಚಾಲೂ ಮಾಡಿದ್ದರಿಂದ ಟೇಲ್ ರೋಟರ್‌ನ ಹೊಡೆತದಿಂದ ಸ್ವಲ್ಪದರಲ್ಲಿ ಪಾರಾಗಿದ್ದರು.

ಮೇ 25ರಂದು ಲಾತೂರು ಜಿಲ್ಲೆಯ ನಿಲಂಗಾದಲ್ಲಿ ಫಡ್ನವೀಸ್‌ರನ್ನು ಹೊತ್ತಿದ್ದ ಹೆಲಿಕಾಪ್ಟರ್ ಮೇಲಕ್ಕೇರುವಾಗ ವಿದ್ಯುತ್‌ತಂತಿಗಳಿಗೆ ಸಿಕ್ಕಿ ನೆಲಕ್ಕೆ ಅಪ್ಪಳಿಸಿತ್ತು.

ಮೇ 10ರಂದು ಗಡಚಿರೋಲಿಯಿಂದ ನಾಗಪುರಕ್ಕೆ ಫಡ್ನವೀಸ್‌ರನ್ನು ಕರೆದೊಯ್ಯ ಬೇಕಿದ್ದ ಹೆಲಿಕಾಪ್ಟರ್ ಅವರು ಹತ್ತಲಿದ್ದ ತಾಣವನ್ನು ತಲುಪುವ ಮುನ್ನವೇ ಪತನ ಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News