ಟಂಡನ್ ಚಾಂಪಿಯನ್

Update: 2017-12-10 18:06 GMT

ಸಿಂಗಾಪುರ, ಡಿ.10: ಸಿಂಗಾಪುರ ಓಪನ್ ಪಿಎಸ್‌ಎ ವರ್ಲ್ಡ್‌ಟೂರ್ ಫೈನಲ್ ಪಂದ್ಯದಲ್ಲಿ ಭಾರತದ ರಮಿತ್ ಟಂಡನ್ ಜಯ ಗಳಿಸುವ ಮೂಲಕ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಇಂದು ನಡೆದ ಫೈನಲ್‌ನಲ್ಲಿ ತೈಪೆಯ ಐದನೇ ಶ್ರೇಯಾಂಕದ ಜೇಮ್ಸ್ ಹುಯಾಂಗ್ ಅವರನ್ನು 11-3, 11-6, 11-3 ಅಂತರದಲ್ಲಿ ಸೋಲಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡರು. ಕಳೆದ ಮೇ ತಿಂಗಳಲ್ಲಿ ಎಸ್‌ವೈಎಸ್ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದ ಟಂಡನ್ ಇದೀಗ ವೃತ್ತಿ ಬದುಕಿನಲ್ಲಿ ಎರಡನೇ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

88ನೇ ಶ್ರೇಯಾಂಕದ ಟಂಡನ್ ಅವರು ಹಾಂಕಾಂಗ್‌ನ ಹೆನ್ರಿ ಲಿಯಾಂಗ್ ವಿರುದ್ಧ 11-3, 11-6, 11-5 ಅಂತರದಲ್ಲಿ ಜಯ ಸಾಧಿಸಿ ಫೈನಲ್ ಪ್ರವೇಶಿಸಿದ್ದರು. ಟಂಡನ್ ಅವರು ಅರ್ಹತಾ ಸುತ್ತಿನಲ್ಲಿ ಸಿಂಗಾಪುರದ ಬೆನೆಡಿಕ್ಟ್ ಚಾನ್ ಅವರನ್ನು 11-8, 11-6, 11-5 ಅಂತರದಲ್ಲಿ ಸೋಲಿಸಿ ಅಭಿಯಾನ ಆರಂಭಿಸಿದ್ದರು. ಮಲೇಶ್ಯಾದ 4ನೇ ಶ್ರೇಯಾಂಕದ ಎಲ್ವಿನ್ ಕಿಯೋ ಅವರನ್ನು 11-7, 11-8, 2-11, 10-12, 12-10 ಅಂತರದಲ್ಲಿ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News