ಕ್ರೋವ್, ವಿಲಿಯಮ್ಸನ್ ದಾಖಲೆ ಸರಿಗಟ್ಟಿದ ರಾಸ್ ಟೇಲರ್

Update: 2017-12-11 18:19 GMT

ಹ್ಯಾಮಿಲ್ಟನ್, ಡಿ.11: ನ್ಯೂಝಿಲೆಂಡ್‌ನ ದಾಂಡಿಗ ರಾಸ್ ಟೇಲರ್ ಅವರು ಮಾಜಿ ನಾಯಕ ಮಾರ್ಟಿನ್ ಕ್ರೋವ್ ಮತ್ತು ಹಾಲಿ ನಾಯಕ ಕೇನ್ ವಿಲಿಯಮ್ಸನ್ ಶತಕಗಳ ದಾಖಲೆಯನ್ನು ಇಂದು ಸರಿಗಟ್ಟಿದ್ದಾರೆ.

 ಸೆಡ್ಡಾನ್ ಪಾರ್ಕ್‌ನಲ್ಲಿ ನಡೆಯುತ್ತಿರುವ ವೆಸ್ಟ್‌ಇಂಡಿಸ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ರಾಸ್ ಟೇಲರ್ ಅವರು 17ನೇ ಶತಕ ದಾಖಲಿಸಿ ಕ್ರೋವ್ ಮತ್ತು ವಿಲಿಯಮ್ಸನ್ ದಾಖಲೆಯನ್ನು ಸರಿಗಟ್ಟಿದರು.

 ಮಾಜಿ ನಾಯಕ ಕ್ರೋವ್ ಅವರು 77 ಟೆಸ್ಟ್‌ಗಳ 131 ಇನಿಂಗ್ಸ್‌ಗಳಲ್ಲಿ ಮತ್ತು ವಿಲಿಯಮ್ಸನ್ 63 ಟೆಸ್ಟ್‌ಗಳ 113 ಇನಿಂಗ್ಸ್‌ಗಳಲ್ಲಿ 17 ಶತಕ ದಾಖಲಿಸಿದ್ದರು. ಇದೀಗ ರಾಸ್ ಟೇಲರ್ 83ಟೆಸ್ಟ್‌ಗಳ 149ನೇ ಇನಿಂಗ್ಸ್‌ನಲ್ಲಿ 17ನೇ ಶತಕ ದಾಖಲಿಸಿದರು.

 33ರ ಹರೆಯದ ರಾಸ್ ಟೇಲರ್ ಅವರು ವಿಂಡೀಸ್‌ನ ರೇಮನ್ ರೈಫರ್ ಎಸೆತದಲ್ಲಿ ಚೆಂಡನ್ನು ಬೌಂಡರಿಗೆ ಅಟ್ಟುವ ಮೂಲಕ ಶತಕ ಪೂರ್ಣಗೊಳಿಸಿದರು.

ನ್ಯೂಝಿಲೆಂಡ್ ಟೇಲರ್ ಶತಕ (ಔಟಾಗದೆ 107) ಮತ್ತು ವಿಲಯಮ್ಸನ್ ಅರ್ಧಶತಕ (54) ನೆರವಿನಲ್ಲಿ 8 ವಿಕೆಟ್ ನಷ್ಟದಲ್ಲಿ 291 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.

ಟೆಸ್ಟ್‌ನ ಮೂರನೇ ದಿನದಾಟದಂತ್ಯಕ್ಕೆ ವೆಸ್ಟ್ ಇಂಡೀಸ್ ಎರಡನೇ ಇನಿಂಗ್ಸ್‌ನಲ್ಲಿ 8 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 30 ರನ್ ಗಳಿಸಿದೆ.

  ಟ್ರಂಟ್ ಬೌಲ್ಟ್ (11ಕ್ಕೆ1) ಮತ್ತು ಟಿಮ್ ಸೌಥಿ (18ಕ್ಕೆ 1) ದಾಳಿಗೆ ಸಿಲುಕಿ ವೆಸ್ಟ್‌ಇಂಡೀಸ್ ಕೀರನ್ ಪೋವೆಲ್(0) ಮತ್ತು ಶಿಮ್ರ್‌ನ್ ಹೆಟ್ಮೆರ್ (15) ವಿಕೆಟ್ ಕಳೆದುಕೊಂಡಿದೆ. ನಾಯಕ ಕ್ರೇಗ್ ಬ್ರಾಥ್‌ವೇಟ್ (13) ಮತ್ತು ಶಾಹಿ ಹೋಪೆ(1) ಔಟಾಗದೆ ಕ್ರೀಸ್‌ನಲ್ಲಿದ್ದಾರೆ.

ಗೆಲುವಿಗೆ 444 ರನ್‌ಗಳ ಸವಾಲನ್ನು ಪಡೆದಿರುವ ವೆಸ್ಟ್‌ಇಂಡೀಸ್ ತಂಡ ಎರಡನೇ ಇನಿಂಗ್ಸ್‌ನಲ್ಲಿ 2 ವಿಕೆಟ್ ಕಳೆದುಕೊಂಡು 30 ರನ್ ಗಳಿಸಿದ್ದು, ಗೆಲುವಿಗೆ ಇನ್ನೂ 414 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿದೆ.

ಸಂಕ್ಷಿಪ್ತ ಸ್ಕೋರ್ ವಿವರ

►ನ್ಯೂಝಿಲೆಂಡ್ ಮೊದಲ ಇನಿಂಗ್ಸ್ 373

►ವೆಸ್ಟ್‌ಇಂಡಿಸ್ ಮೊದಲ ಇನಿಂಗ್ಸ್ 221

►ನ್ಯೂಝಿಲೆಂಡ್ ಎರಡನೇ ಇನಿಂಗ್ಸ್ 77.4 ಓವರ್‌ಗಳಲ್ಲಿ 291/8 ಡಿಕ್ಲೇರ್( ರಾಸ್ ಟೇಲರ್ ಔಟಾಗದೆ 107, ವಿಲಿಯಮ್ಸನ್ 54; ಕಮಿನ್ಸ್ 69ಕ್ಕೆ3).

►ವೆಸ್ಟ್‌ಇಂಡಿಸ್ ಎರಡನೇ ಇನಿಂಗ್ಸ್ 8 ಓವರ್‌ಗಳಲ್ಲಿ 30/2( ಬ್ರಾಥ್‌ವೈಟ್ ಬ್ಯಾಟಿಂಗ್ 13, ಶಿಮ್ರಾನ್ 15; ಬೌಲ್ಟ್ 11ಕ್ಕೆ1).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News