ಪಾಕಿಸ್ತಾನ, ಶ್ರೀಲಂಕಾ ಜೈಲುಗಳಲ್ಲಿ ಭಾರತದ 681 ಮೀನುಗಾರರು

Update: 2017-12-21 15:08 GMT

ಪಣಜಿ, ಡಿ. 21: ಪಾಕಿಸ್ತಾನ ಹಾಗೂ ಶ್ರೀಲಂಕಾದ ವಶದಲ್ಲಿ 681 ಮೀನುಗಾರರು ಇದ್ದಾರೆ ಎಂದು ರಾಜ್ಯ ಸಭೆಗೆ ಗುರುವಾರ ಮಾಹಿತಿ ನೀಡಲಾಯಿತು.

ಮೇಲ್ಮನೆಯಲ್ಲಿ ನೀಡಿದ ಲಿಖತ ಉತ್ತರದಲ್ಲಿ ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ವಿ.ಕೆ. ಸಿಂಗ್, ಪಾಕಿಸ್ತಾನದ ಜೈಲಿನಲ್ಲಿ 537 ಹಾಗೂ ಶ್ರೀಲಂಕಾ ಜೈಲಿನಲ್ಲಿ 144 ಮೀನುಗಾರರು ಇದ್ದಾರೆ ಎಂದರು.

 ಭಾರತದ ಮೀನುಗಾರರ 1,000 ದೋಣಿಗಳು ಪಾಕಿಸ್ತಾನದ ವಶದಲ್ಲಿ ಹಾಗೂ 144 ದೋಣಿಗಳು ಶ್ರೀಲಂಕಾ ವಶದಲ್ಲಿವೆ ಎಂದು ಅವರು ತಿಳಿಸಿದರು.

ಆದಾಗ್ಯೂ, ಪಾಕಿಸ್ತಾನ ತನ್ನ ವಶದಲ್ಲಿರುವ ಮೀನುಗಾರರು ಹಾಗೂ ದೋಣಿಗಳ ಸಂಖ್ಯೆಯ ಮಾಹಿತಿ ನೀಡಿಲ್ಲ ಎಂದು ಸಿಂಗ್ ಹೇಳಿದ್ದಾರೆ.

ಭಾರತದ ಮೀನುಗಾರರ ಬಿಡುಗಡೆ ಹಾಗೂ ವಾಪಸಾತಿ ಪಾಕಿಸ್ತಾನ ಹಾಗೂ ಭಾರತದ ದ್ವಿಪಕ್ಷೀಯ ಸಂಬಂಧದ ಮೇಲೆ ಪರಿಣಾಮ ಬೀರಲಿದೆ. ರಚನಾತ್ಮಕ ದ್ವಿಪಕ್ಷೀಯ ಮಾತುಕತೆಯ ಹೊರತಾಗಿಯೂ ಎರಡೂ ದೇಶಗಳು ಮೀನುಗಾರರನ್ನು ಬಿಡುಗಡೆ ಮಾಡಬೇಕು ಎಂದು ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News