ಸ್ಟಾರ್ಕ್, ಪೈನ್ ಬಾಕ್ಸಿಂಗ್ ಡೇ ಟೆಸ್ಟ್ ಗೆ ಸಂಶಯ

Update: 2017-12-22 18:24 GMT

ಮೆಲ್ಬೋರ್ನ್, ಡಿ.22: ಆಸ್ಟ್ರೇಲಿಯದ ವಿಕೆಟ್ ಕೀಪರ್ ಟಿಮ್ ಪೈನ್ ಮತ್ತು ವೇಗಿ ಮಿಚೆಲ್ ಸ್ಟಾರ್ಕ್ ಅವರು ಇಂಗ್ಲೆಂಡ್ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ (ನಾಲ್ಕನೇ ಟೆಸ್ಟ್)ನಲ್ಲಿ ಆಡುವ ಸಾಧ್ಯತೆ ಇಲ್ಲ.

 ಗಾಯಗೊಂಡಿರುವ ಸ್ಟಾರ್ಕ್ ಮಂಗಳವಾರ ಆರಂಭಗೊಳ್ಳಲಿರುವ ಟೆಸ್ಟ್‌ನಲ್ಲಿ ಆಡುವುದು ದೃಢಪಟ್ಟಿಲ್ಲ. ಪ್ರಸ್ತುತ ಸ್ಟಾರ್ಕ್ ಆ್ಯಶಸ್ ಸರಣಿಯಲ್ಲಿ ಗರಿಷ್ಠ ವಿಕೆಟ್(19) ಪಡೆದಿದ್ದಾರೆ.

ಆಸ್ಟ್ರೇಲಿಯ ಈ ಟೆಸ್ಟ್ ಸರಣಿಯನ್ನು 3-0 ಅಂತರದಲ್ಲಿ ವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಒತ್ತಡದಿಂದ ಪಾರಾಗಿದೆ. ಇನ್ನುಳಿದ ಪಂದ್ಯಗಳು ಆಸ್ಟ್ರೇಲಿಯದ ಪಾಲಿಗೆ ಅಷ್ಟೇನೂ ಪ್ರಾಮುಖ್ಯವಾಗಿಲ್ಲ.

ಒಂದು ವೇಳೆ ಸ್ಟಾರ್ಕ್ ತಂಡದಿಂದ ಹೊರಗುಳಿದರೆ ಜಾಕ್ಸನ್ ಬಿಡ್ ಅಂತಿಮ ಹನ್ನೊಂದರಲ್ಲಿ ಸ್ಥಾನ ಪಡೆಯಲಿದ್ದಾರೆ. ವಿಕೆಟ್ ಕೀಪರ್ ಟಿಮ್ ಪೈನ್ ಅವರು ಆಡುವ ಸಾಧ್ಯತೆ ದೂರವಾಗಿದೆ. ಆ್ಯಶಸ್ ಸರಣಿಗೆ ತಂಡದಲ್ಲಿ ಅವಕಾಶ ಕಳೆದುಕೊಂಡಿರುವ ಪೀಟರ್ ಹ್ಯಾಂಡ್ಸ್‌ಕಂಬ್ ಅವರು ಟಿಮ್ ಪೈನ್ ಬದಲಿಗೆ ಅವಕಾಶ ಪಡೆಯುವುದನ್ನು ನಿರೀಕ್ಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News