ಗುಜರಾತಿನಲ್ಲಿರುವ ‘ನಮ್ಮ ಅತ್ತಿಗೆ’ಗೂ ನ್ಯಾಯ ಸಿಗಲಿ: ಉವೈಸಿ

Update: 2017-12-28 13:49 GMT

ಹೊಸದಿಲ್ಲಿ, ಡಿ.28: ತ್ರಿವಳಿ ತಲಾಖ್ ಮಸೂದೆಯನ್ನು ಗುರುವಾರ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಮಂಡಿಸಿದರು.

ಈ ಸಂದರ್ಭ ವಿಪಕ್ಷಗಳಾದ ಟಿಎಂಸಿ, ಬಿಜೆಡಿ, ಆರ್ ಜೆಡಿ, ಎಐಎಂಐಎಂನಿಂದ ಮಸೂದೆಗೆ ಭಾರೀ ವಿರೋಧಗಳು ವ್ಯಕ್ತವಾಯಿತು. ಈ ವೇಳೆ ಮಾತನಾಡಿದ ಅಸಾದುದ್ದೀನ್ ಉವೈಸಿ, “ಗುಜರಾತ್ ನಲ್ಲಿರುವ ನಮ್ಮ ಅತ್ತಿಗೆಯೂ ಸೇರಿದಂತೆ ಎಲ್ಲಾ ಧರ್ಮಗಳ 20 ಲಕ್ಷ ಏಕಾಂಗಿ ಮಹಿಳೆಯರಿಗೆ ನ್ಯಾಯ ದೊರೆಯಬೇಕು ಎಂದರು.

ತ್ರಿವಳಿ ತಲಾಖನ್ನು ಅಪರಾಧವನ್ನಾಗಿಸುವ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಉವೈಸಿ, ಪ್ರಧಾನಿ ನರೇಂದ್ರ ಮೋದಿಯವರ ಪತ್ನಿಯ ಹೆಸರನ್ನು ಹೇಳದೆ “ನಮ್ಮ ಅತ್ತಿಗೆಯಂತಹ 20 ಲಕ್ಷ ಮಹಿಳೆಯರಿಗೆ ನ್ಯಾಯ ದೊರಕಬೇಕು” ಎಂದರು.

ತ್ರಿವಳಿ ತಲಾಖ್ ಮಸೂದೆಯನ್ನು ವಿರೋಧಿಸಿದ ಉವೈಸಿ. ಈ ಮಸೂದೆಯು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಇದು ಮುಸ್ಲಿಮ್ ಮಹಿಳೆಯರಿಗೆ ಅನ್ಯಾಯದಂತಿದೆ. ಪತಿ ತೊರೆದು ಹೋದ, ಇತರ ಧರ್ಮಗಳ 20 ಲಕ್ಷ ಮಹಿಳೆಯರಿಗೂ ಒಂದು ಕಾನೂನು ರಚಿಸಿ, ಇದರಲ್ಲಿ ನಮ್ಮ ಗುಜರಾತಿನ ಅತ್ತಿಗೆಯೂ ಸೇರಿರಲಿ…. ಅವರಿಗೂ ನ್ಯಾಯ ಸಿಗಬೇಕು” ಎಂದರು,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News