ಹಿರಿಯರ ಸೀಟನ್ನು ಇತರರು ಆಕ್ರಮಿಸುವುದು ಸರಿಯೇ?

Update: 2017-12-28 18:21 GMT

ಮಾನ್ಯರೇ,

60 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೆ ಗುರುತಿನ ಕಾರ್ಡು ಕೊಡಲಾಗುತ್ತಿದೆ. ಎಲ್ಲಾ ಬಸ್ಸುಗಳಲ್ಲಿಯೂ ಹಿರಿಯ ನಾಗರಿಕರಿಗೆ 2 ಸೀಟು ಕಾಯ್ದಿರಿಸಲಾಗಿದೆ. ವಿಪರ್ಯಾಸವೆಂದರೆ ಆ ಸೀಟುಗಳು ಅವರಿಗೆ ಸಿಗುತ್ತಿದೆಯೇ? ಹೆಚ್ಚಿನ ಸಂದರ್ಭಗಳಲ್ಲಿ ಇಲ್ಲವೆನ್ನಬೇಕಾಗುತ್ತದೆ. ಹಿರಿಯ ನಾಗರಿಕರು ಎಲ್ಲಾ ಮನೆಗಳಲ್ಲೂ ಇರುತ್ತಾರೆ. ಹಿರಿಯ ನಾಗರಿಕರ ದಿನ ಅಂತ ಆಚರಣೆಯೂ ಇದೆ. ಆದರೆ ಬಸ್ಸುಗಳಲ್ಲಿ ಅವರ ಸೀಟನ್ನು ಮಾತ್ರ ಯುವಕ, ಯುವತಿಯರೇ ಆಕ್ರಮಿಸುತ್ತಾರೆ. ಕೆಲವು ಮಹಿಳೆಯರು ತಮಗೆ ಮೀಸಲಾದ ಸೀಟುಗಳು ಖಾಲಿ ಇದ್ದರೂ ಹಿರಿಯ ನಾಗರಿಕರ ಸೀಟುಗಳಲ್ಲಿಯೇ ಕುಳಿತುಕೊಳ್ಳುತ್ತಾರೆ. ಯುವಕರಲ್ಲಿ ಅವಿದ್ಯಾವಂತರು ಮಾತ್ರವಲ್ಲ, ವಿದ್ಯಾವಂತರು ಕೂಡಾ ಈ ಸೀಟುಗಳಲ್ಲಿಯೇ ಕುಳಿತುಕೊಳ್ಳುತ್ತಾರೆ. ಆದರೆ ಬಸ್ಸು ನಿರ್ವಾಹಕರು ಈ ಬಗ್ಗೆ ಮೌನವಾಗಿರುತ್ತಾರೆ. ಹಿರಿಯ ನಾಗರಿಕರ ಗುರುತಿನ ಚೀಟಿ ತೋರಿಸಿದರೂ ನಿರ್ವಾಹಕ ಸೀಟು ದೊರಕಿಸಿ ಕೊಡುವುದಿಲ್ಲ.

ಆದ್ದರಿಂದ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಿ ಇನ್ನಾದರೂ ಹಿರಿಯ ನಾಗರಿಕರ ಸುಗಮ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಬೇಕು.

-ಪುತ್ತುಬಾವ ಗಝನಿ,ದೇರಳಕಟ್ಟೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News