ಕಣ್ಣೂರು: ಪೊಲೀಸ್ ಠಾಣೆ ಹಿಂಭಾಗ ಬಾಂಬ್ ಸ್ಫೋಟ

Update: 2017-12-30 14:32 GMT
ಸಾಂದರ್ಭಿಕ ಚಿತ್ರ

ಕಣ್ಣೂರು, ಡಿ. 30: ಇಲ್ಲಿನ ಕೂತುಪರಂಬು ಪೊಲೀಸ್ ಠಾಣೆ ಶನಿವಾರ ಮುಂಜಾನೆ ಬಾಂಬ್ ದಾಳಿಗೆ ಒಳಗಾಗಿದೆ.ಪೊಲೀಸ್ ಠಾಣೆಯ 30 ಮೀಟರ್ ದೂರದಲ್ಲಿ ಮುಂಜಾನೆ 12.30ರ ಹೊತ್ತಿಗೆ ಬಾಂಬ್ ಸ್ಪೋಟಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.

ಬಾಂಬ್ ಸ್ಪೋಟದಿಂದ ಪೊಲೀಸ್ ಠಾಣೆಯ ಕಟ್ಟಡಕ್ಕೆ ಹಾನಿಯಾಗಿದೆ ಹಾಗೂ ಸಿಬಂದಿಗೆ ಗಾಯಗಳಾಗಿವೆ ಎಂದು ಅವರು ತಿಳಿಸಿದ್ದಾರೆ.

ಪೊಲೀಸ್ ಠಾಣೆಯ ಆವರಣದ ಹೊರಗಿನಿಂದ ಬಾಂಬ್ ಎಸೆಯಲಾಗಿದೆ. ದಾಳಿ ರೂವಾರಿಯನ್ನು ಗುರುತಿಸಲು ತನಿಖೆ ನಡೆಸಲಾಗುತ್ತಿದೆ. ಆರೋಪಿಗಳು ವಾಹನದಲ್ಲಿ ಬಂದಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿಯ ಹಿಂದಿನ ಉದ್ದೇಶದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಡಿಸೆಂಬರ್ 29ರಂದು ಮುಂಬಾರಂನಿಂದ ಬಂಧಿಸಲಾದ ಆರೆಸ್ಸೆಸ್‌ನ ಮೂವರು ಕಾರ್ಯಕರ್ತರು ಹಾಗೂ ಬಾಂಬ್ ದಾಳಿಗೆ ಯಾವುದೇ ಸಂಬಂಧ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News