ಮುಂಬೈ ಕಮಲಾ ಮಿಲ್ಸ್ ಅಗ್ನಿ ದುರಂತ : ಮೋಜೊ ಬ್ರಿಸ್ಟ್ರೊ ಪಬ್ ಮಾಲಕನ ಬಂಧನ

Update: 2018-01-16 15:11 GMT

ಮುಂಬೈ, ಜ. 16: ಕಮಲಾ ಮಿಲ್ಸ್ ಕಂಪೌಂಡ್ ಬೆಂಕಿ ಅವಘಡದ ಬಳಿಕ ಬಂಧನಕ್ಕೊಳಗಾಗುವುದರಿಂದ ತಪ್ಪಿಸಿಕೊಂಡಿದ್ದ ಮೋಜೊ ಬ್ರಿಸ್ಟ್ರೊ ಪಬ್ ಮಾಲಕ ಯುಗ್ ಟುಲ್ಲಿ ಮಂಗಳವಾರ ಮುಂಬೈ ಪೊಲೀಸರ ಮುಂದೆ ಶರಣಾಗಿದ್ದಾರೆ.

ಎನ್.ಎಂ. ಜೋಶಿ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಬೆಳಗ್ಗೆ ಪೊಲೀಸರ ಮುಂದೆ ಶರಣಾದ ಬಳಿಕ ನಾವು ಯುಗ್ ಟುಲ್ಲಿಯನ್ನು ಬಂಧಿಸಿದ್ದೇವೆ. ಅನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದೇವೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್. ಕುಮಾರ್ ತಿಳಿಸಿದ್ದಾರೆ.

ಮೋಜೊ ಬ್ರಿಸ್ಟ್ರೊ ಹಾಗೂ ವನ್ ಅಬೊವ್‌ನ ಮಾಲಕರನ್ನು ಬಂಧಿಸಿದ ಬಳಿಕ ಕಳೆದ ಒಂದು ವಾರಗಳಿಗಳಿಂದ ಟುಲ್ಲಿ ತಲೆ ಮರೆಸಿಕೊಂಡಿದ್ದ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರವಿವಾರ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಟುಲ್ಲಿ ಅವರನ್ನು ಪತ್ನಿಯೊಂದಿಗೆ ಪತ್ತೆ ಹಚ್ಚಲಾಗಿತ್ತು. ಆದರೆ, ಪೊಲೀಸರು ಆಗಮಿಸುವ ಮುನ್ನ ಅವರು ನಾಪತ್ತೆಯಾಗಿದ್ದರು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News