ಗುಲ್ಮಾರ್ಗ್ : ಹಿಮಪಾತಕ್ಕೆ ಸಿಲುಕಿ ಸ್ವೀಡನ್ ಪರ್ವತಾರೋಹಿ ಮೃತ್ಯು

Update: 2018-01-18 12:33 GMT

ಜಮ್ಮು, ಜ.18: ಜಮ್ಮು-ಕಾಶ್ಮೀರದ ಗುಲ್ಮಾರ್ಗ್ ಸ್ಕೈ ರೆಸಾರ್ಟ್ ಬಳಿ ಹಿಮರಾಶಿಯಲ್ಲಿ ಸಿಲುಕಿಕೊಂಡಿದ್ದ ಸ್ವೀಡನ್ ಪರ್ವತಾರೋಹಿಯೊಬ್ಬ ಮೃತಪಟ್ಟಿದ್ದು ಇನ್ನೋರ್ವನನ್ನು ಪೊಲೀಸರ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ರಕ್ಷಿಸಲಾಗಿದೆ.

ಬಾರಾಮುಲ್ಲಾ ಜಿಲ್ಲೆಯ ಅಫರ್‌ವತ್ ಪರ್ವತಶಿಖರದಲ್ಲಿ ಇಬ್ಬರು ಸ್ವೀಡನ್ ಪರ್ವತಾರೋಹಿಗಳು ಹಿಮದರಾಶಿಯಲ್ಲಿ ಸಿಲುಕಿಕೊಂಡಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಅಷ್ಟರಲ್ಲೇ ಡೇನಿಯಲ್ ಎಂಬ ಪರ್ವತಾರೋಹಿ ಮೃತಪಟ್ಟಿದ್ದಾನೆ. ಇನ್ನೋರ್ವ ಪರ್ವತಾರೋಹಿ ಬೆಂಜಮಿನ್ ಎಂಬಾತನನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಈ ಪ್ರದೇಶದಲ್ಲಿ ಹಿಮಪಾತದ ಎಚ್ಚರಿಕೆಯನ್ನು ನೀಡಲಾಗಿದ್ದರೂ ಸ್ವೀಡನ್‌ನ ಪರ್ವತಾರೋಹಿಗಳು ಪರ್ವತಾರೋಹಣ ನಡೆಸಲು ಹೇಗೆ ಅವಕಾಶ ಪಡೆದರು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News