ವಡೋದರದ ಕೆಮಿಕಲ್ ಫ್ಯಾಕ್ಟರಿಯಲ್ಲಿ ಸ್ಫೋಟ: ನಾಲ್ವರು ಮೃತ್ಯು

Update: 2018-01-21 13:26 GMT

ವಡೋದರ, ಜ.21: ಕೆಮಿಕಲ್ ಫ್ಯಾಕ್ಟರಿಯೊಂದರಲ್ಲಿ ಸಂಭವಿಸಿದ ಸ್ಫೋಟದಿಂದ 4 ಮಂದಿ ಕಾರ್ಮಿಕರು ಮೃತಪಟ್ಟು 9 ಮಂದಿ ಗಾಯಗೊಂಡಿರುವ ಘಟನೆ ವಡೋದರದಲ್ಲಿ ನಡೆದಿದೆ.

ಜಿಎಸ್ ಪಿ ಕ್ರಾಪ್ ಸೈನ್ಸ್ ರಾಸಾಯನಿಕ ಸ್ಥಾವರದಲ್ಲಿ ಸಂಭವಿಸಿ ಸ್ಫೋಟದಿಂದ ಅಗ್ನಿ ಅನಾಹುತ ಸಂಭವಿಸಿತು. ಗುಜರಾತ್ ನ ಕೈಗಾರಿಕಾ ವಲಯದಲ್ಲಿ ಈ ಸ್ಥಾವರ ಇದೆ ಎನ್ನಲಾಗಿದೆ.

ಘಟನೆಯಲ್ಲಿ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ವಡೋದರ ಜಿಲ್ಲಾಧಿಕಾರಿ ಪಿ. ಭಾರತಿ ಮಾಹಿತಿ ನೀಡಿದ್ದಾರೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದವರು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News