ಬವಾನಾ ಬೆಂಕಿ ದುರಂತ ಪ್ರಕರಣ: ಪಟಾಕಿ ಗೋದಾಮು ಮಾಲಕನ ಬಂಧನ

Update: 2018-01-21 13:36 GMT

 ಹೊಸದಿಲ್ಲಿ, ಜ.21: ಹೊಸದಿಲ್ಲಿಯ ಬವಾನಾ ಕೈಗಾರಿಕಾ ಪ್ರದೇಶದ ಎರಡಂತಸ್ತಿನ ಕಟ್ಟಡವೊಂದರಲ್ಲಿ ಶನಿವಾರ ಸಂಭವಿಸಿದ್ದ ಬೆಂಕಿ ಅನಾಹುತ ಪ್ರಕರಣಕ್ಕೆ ಸಂಬಂಧಿಸಿ, ಪಟಾಕಿ ಗೋದಾಮಿನ ಮಾಲಕನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದು ಕೊಲೆಯಲ್ಲದ ನರಹತ್ಯೆ ಹಾಗೂ ದಹನಶೀಲ ವಸ್ತುಗಳ ಬಗ್ಗೆ ನಿರ್ಲಕ್ಷ ತೋರಿದ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಗರಿಷ್ಠ 10 ವರ್ಷದ ಸೆರೆವಾಸ ವಿಧಿಸಬಹುದಾಗಿದೆ.

ಮನೋಜ್ ಜೈನ್ ಎಂಬವರ ಮಾಲಕತ್ವದ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ್ದ ಬೆಂಕಿ ದುರಂತದಲ್ಲಿ 17 ಮಂದಿ ಸಾವನ್ನಪ್ಪಿದ್ದರು. ಈ ಗೋದಾಮಿನಲ್ಲಿ ‘ ತಂಪು ಪಟಾಕಿ’ ಎಂದೇ ಕರೆಯಲಾಗುವ, ಹೋಳಿ ಆಚರಣೆ ಅಥವಾ ಸ್ಟೇಜ್‌ಶೋ ಕಾರ್ಯಕ್ರಮದಲ್ಲಿ ಬಳಸಲಾಗುವ ಪಟಾಕಿಗಳನ್ನು ಶೇಖರಿಸಿ ಇಡಲಾಗಿತ್ತು. ಜನವರಿ 1ರಿಂದ ಈ ಕಟ್ಟಡವನ್ನು ಜೈನ್ ಬಾಡಿಗೆಗೆ ಪಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News