ಬೀಫ್ ಸಾಗಾಟದ ಶಂಕೆಯಲ್ಲಿ ಟ್ರಕ್ ಚಾಲಕನಿಗೆ ಹಲ್ಲೆಗೈದ ‘ಗೋರಕ್ಷಕರು’

Update: 2018-01-31 17:21 GMT

ಮುಝಫ್ಫರ್ ಪುರ, ಜ.31: ಬೀಫ್ ಸಾಗಾಟ ನಡೆಯುತ್ತಿದೆ ಎನ್ನುವ ಶಂಕೆಯಲ್ಲಿ ಟ್ರಕ್ಕೊಂದನ್ನು ತಡೆದ ಗೋರಕ್ಷಕರು ಚಾಲಕನಿಗೆ ಹಲ್ಲೆ ನಡೆಸಿ, ವಾಹನವನ್ನು ಪುಡಿಗೈದ ಘಟನೆ ಮುಝಫ್ಫರ್ ಪುರದಲ್ಲಿ ನಡೆದಿದೆ.

ಆದರೆ ವಾಹನದಲ್ಲಿ ಏನೂ ಇರಲಿಲ್ಲ ಎನ್ನಲಾಗಿದೆ. ಆದರೆ ಚಾಲಕನ ನೀಡಿದ ಮಾಹಿತಿಯಂತೆ ಫ್ಯಾಕ್ಟರಿಯೊಂದರಿಂದ ಪೊಲೀಸರು ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಮಾಂಸ ಬೀಫ್ ಹೌದೇ ಎನ್ನುವುದನ್ನು ಖಾತರಿಪಡಿಸಲು ಬೇರೆಡೆಗೆ ಕಳುಹಿಸಲಾಗಿದೆ.

ಗೋರಕ್ಷಣೆಯ ಹೆಸರಿನಲ್ಲಿ ದೇಶಾದ್ಯಂತ ದುಷ್ಕರ್ಮಿಗಳಿಂದ ಕಳೆದ ವರ್ಷ ದಾಳಿಗಳು ನಡೆದಿತ್ತು. ಇದರಲ್ಲಿ ಪೆಹ್ಲು ಖಾನ್ ಹತ್ಯೆ ಭಾರೀ ಚರ್ಚೆಗೊಳಗಾಗಿತ್ತು. ಗೋರಕ್ಷಕರ ಕೃತ್ಯದ ವಿರುದ್ಧ ಭಾರೀ ಆಕ್ರೋಶವೂ ವ್ಯಕ್ತವಾಗಿತ್ತು.

ಗೋರಕ್ಷಣೆಯ ಹೆಸರಿನಲ್ಲಿ ನಡೆಯುವ ಹಿಂಸೆಯನ್ನು ಪ್ರಧಾನಿ ಮೋದಿ ಖಂಡಿಸಿದ್ದರು. “ಗೋವಿನ ಹೆಸರಿನಲ್ಲಿ ಮನುಷ್ಯರನ್ನು ಕೊಲ್ಲುವುದನ್ನು ಒಪ್ಪಲಾಗದು. ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಅಧಿಕಾರವಿಲ್ಲ. ಹಿಂಸೆಯು ಯಾವುದೇ ಸಮಸ್ಯೆಗೆ ಪರಿಹಾರವಲ್ಲ” ಎಂದವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News