ಟ್ವೆಂಟಿ-20 ಪಂದ್ಯದಲ್ಲಿ ಭಾರತದ ವನಿತೆಯರಿಗೆ ಜಯ

Update: 2018-02-13 18:25 GMT

ಜೋಹಾನ್ಸ್‌ಬರ್ಗ್, ಫೆ.13: ದಕ್ಷಿಣ ಆಫ್ರಿಕ ವಿರುದ್ಧ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ 7 ವಿಕೆಟ್‌ಗಳ ಜಯ ಗಳಿಸಿದೆ.

ಸೆನ್‌ವೆಸ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 165 ರನ್ ಗಳಿಸಬೇಕಿದ್ದ ಭಾರತ 7 ಎಸೆತಗಳು ಬಾಕಿ ಇರುವಾಗಲೇ 3 ವಿಕೆಟ್ ನಷ್ಟದಲ್ಲಿ 168 ರನ್ ಗಳಿಸಿತು.

ತಂಡದಲ್ಲಿ ಮೊದಲ ಬಾರಿ ಆಡಿದ 17ರ ಹರೆಯದ ಜೆಮಿಮಾ ರೊಡ್ರಿಗಸ್ 30 ನಿಮಿಷಗಳ ಬ್ಯಾಟಿಂಗ್‌ನಲ್ಲಿ 27 ಎಸೆತಗಳನ್ನು ಎದುರಿಸಿದರು. 4 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ 37 ರನ್ ಗಳಿಸುವ ಮೂಲಕ ಮಿಂಚಿದರು.

ಆರಂಭಿಕ ಆಟಗಾರ್ತಿ ಮಿಥಾಲಿ ರಾಜ್ ಅವರು 72 ನಿಮಿಷಗಳ ಬ್ಯಾಟಿಂಗ್‌ನಲ್ಲಿ 48 ಎಸೆತಗಳನ್ನು ಎದುರಿಸಿದರು. 6 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 54 ರನ್ ಗಳಿಸಿ ಔಟಾಗದೆ ಉಳಿದರು.

ಮಿಥಾಲಿ ರಾಜ್ ಮತ್ತು ಸ್ಮತಿ ಮಂಧಾನ ಇನಿಂಗ್ಸ್ ಆರಂಭಿಸಿ ಮೊದಲ ವಿಕೆಟ್‌ಗೆ 47 ರನ್ ಜಮೆ ಮಾಡಿದರು. ಮಂಧಾನ 28 ರನ್(15ಎ, 3ಬೌ,2ಸಿ) ಗಳಿಸಿ ಔಟಾದರು.

ನಾಯಕಿ ಹರ್ಮನ್‌ಪ್ರೀತ್ ಕೌರ್ ಖಾತೆ ತೆರೆಯುವ ಮೊದಲೇ ರನೌಟಾಗಿ ಪೆವಿಲಿಯನ್ ಸೇರಿದರು. ಮೂರನೇ ವಿಕೆಟ್‌ಗೆ ಮಿಥಾಲಿ ಮತ್ತು ರೊಡ್ರಿಗಸ್ ಅವರು 69 ರನ್ ಜಮೆ ಮಾಡಿದರು.

4ನೇ ವಿಕೆಟ್‌ಗೆ ಮಿಥಾಲಿ ರಾಜ್ ಮತ್ತು ವೇದಾ ಕೃಷ್ಣಮೂರ್ತಿ 52 ರನ್‌ಗಳ ಜೊತೆಯಾಟ ನೀಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಟಾಸ್ ಜಯಿಸಿದ ಭಾರತ ತಂಡದ ನಾಯಕಿ ಕೌರ್ ಅವರು ಆಫ್ರಿಕವನ್ನು ಬ್ಯಾಟಿಂಗ್‌ಗೆ ಇಳಿಸಿದರು.

ಆಫ್ರಿಕ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 164 ರನ್ ಗಳಿಸಿತ್ತು. ಆಫ್ರಿಕ ತಂಡದ ಲೀ (19), ನಾಯಕಿ ಡಿ ವ್ಯಾನ್ ನೀಕೆರ್ಕ್ 38 ರನ್, ಲೂಯಿಸ್ 18ರನ್, ಎಂಡು ಪ್ರೀಝ್ 31ರನ್, ಎನ್ ಡೆ ಕ್ಲರ್ಕ್ ಔಟಾಗದೆ 23 ರನ್ ಮತ್ತು ಟ್ರೊಯನ್ ಔಟಾಗದೆ 32 ರನ್ ಸೇರಿಸಿದರು.

ಸಂಕ್ಷಿಪ್ತ ಸ್ಕೋರ್ ವಿವರ

►ದಕ್ಷಿಣ ಆಫ್ರಿಕ 20 ಓವರ್‌ಗಳಲ್ಲಿ 164/4(ನೀಕೆರ್ಕ್ 38, ಟ್ರೆಯೊನ್ ಔಟಾಗದೆ 32; ಪಾಟೀಲ್ 23ಕ್ಕೆ 2).

►ಭಾರತ 18.5 ಓವರ್‌ಗಳಲ್ಲಿ 168/3(ಮಿಥಾಲಿ ರಾಜ್ ಔಟಾಗದೆ 54, ವೇದಾ ಔಟಾಗದೆ 37, ರೊಡ್ರಿಗಸ್ 37).

►ಪಂದ್ಯಶ್ರೇಷ್ಠ : ಮಿಥಾಲಿ ರಾಜ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News