ಸುಶೀಲ್ ಕುಮಾರ್ ಹೊರಕ್ಕೆ

Update: 2018-02-24 18:22 GMT

ಹೊಸದಿಲ್ಲಿ, ಫೆ.24: ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಪದಕ ಜಯಿಸಿರುವ ಭಾರತ ಸ್ಟಾರ್ ಕುಸ್ತಿಪಟು ಸುಶೀಲ್ ಕುಮಾರ್ ಮುಂಬರುವ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಗಾಯದ ಕಾರಣದಿಂದಾಗಿ ಭಾಗವಹಿಸುವುದಿಲ್ಲ. ಅವರ ಬದಲಿಗೆ ಪ್ರವೀಣ್ ರಾಣಾ ಪದಕದ ಬೇಟೆ ನಡೆಸಲಿದ್ದಾರೆ.

ಫೆ.27ರಿಂದ ಮಾರ್ಚ್ 4ರ ತಕ ಕಿರ್ಗಿಸ್ತಾನದ ಬಿಶ್‌ಕೆಕ್‌ನಲ್ಲಿ ನಡೆಯಲಿರುವ ಕೂಟದಲ್ಲಿ ಗಾಯದ ಕಾರಣದಿಂದಾಗಿ ಸುಶೀಲ್ ಕುಮಾರ್ ಸ್ಪರ್ಧಿಸುವ ಅವಕಾಶ ಕಳೆದುಕೊಂಡಿದ್ದಾರೆ.

ಭಾರತದ ಕುಸ್ತಿ ಒಕ್ಕೂಟವು ಸುಶೀಲ್ ಕುಮಾರ್ ಬದಲಿಗೆ ರಾಣಾ ಅವರನ್ನು ಅಂತಿಮಗೊಳಿಸಿದೆ. 74 ಕೆ.ಜಿ. ವಿಭಾಗದಲ್ಲಿ ರಾಣಾ ಭಾಗವಹಿಸಲಿದ್ದಾರೆ.

ಸುಶೀಲ್ ಕುಮಾರ್ ಅವರು ಏಶ್ಯನ್ ಚಾಂಪಿಯನ್ ಚಾಂಪಿಯನ್‌ಶಿಪ್ ಮತ್ತು ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನ ಆಯ್ಕೆ ಪ್ರಕ್ರಿಯೆಯ ಫೈನಲ್‌ನಲ್ಲಿ ರಾಣಾ ಅವರನ್ನು ಮಣಿಸಿದ್ದರು. ಈ ವೇಳೆ ಸುಶೀಲ್ ಕುಮಾರ್ ಮತ್ತು ರಾಣಾ ಬೆಂಬಲಿಗರ ನಡುವೆ ಹೊಡೆದಾಟ ಸಂಭವಿಸಿತ್ತು. 34ರ ಹರೆಯದ ಸುಶೀಲ್ ಕುಮಾರ್ ಗಾಯದ ಕಾರಣದಿಂದಾಗಿ ಪ್ರೊ ಕುಸ್ತಿ ಲೀಗ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿದು ಬಂದಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News