ರಾಜಕೀಯದತ್ತ ಡೇವಿಡ್ ವಾರ್ನರ್ ಒಲವು

Update: 2018-02-27 18:26 GMT

ಮೆಲ್ಬೋರ್ನ್, ಫೆ.27: ಆಸ್ಟ್ರೇಲಿಯ ಕ್ರಿಕೆಟ್ ತಂಡದ ಆರಂಭಿಕ ನಾಯಕ ಡೇವಿಡ್ ವಾರ್ನರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ರಾಜಕಾರಣಕ್ಕೆ ಇಳಿಯುವ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದಾರೆ.

 ‘‘ಕ್ರಿಕೆಟ್ ಬಳಿಕ ಏನಾದರೂ ಮಾಡಬೇಕೆಂದು ಯೋಚಿಸಿದ್ದೇನೆ. ನನಗೆ ಜವಾಬ್ದಾರಿಯಿದೆ. ಯಾರಿಗಾದರೂ ಸಹಾಯ ಮಾಡಲು ಏನಾದರೂ ಮಾಡಬಲ್ಲೆ. ಸಹಾಯದ ಅಗತ್ಯವಿದ್ದವರಿಗೆ ನೆರವು ನೀಡಬೇಕಾಗಿದೆ. ನಾನು ಬಾಲಕನಾಗಿದ್ದಾಗಲೇ ನನ್ನ ಸಹೋದರೊಂದಿಗೆ ಮನೆಯಲ್ಲಿ ಬಟ್ಟೆ ತೊಳೆಯುವುದು, ಇಸ್ತ್ರಿ ಹಾಕುವ ಕೆಲಸ ಮಾಡುತ್ತಿದ್ದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News