ತ್ರಿಕೋನ ಟ್ವೆಂಟಿ-20 ಸರಣಿ: ಮ್ಯಾಥ್ಯೂಸ್ ಅಲಭ್ಯ
Update: 2018-02-27 23:58 IST
ಕೊಲಂಬೊ, ಫೆ.27: ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆ್ಯಂಜೆಲೊ ಮ್ಯಾಥ್ಯೂಸ್ ಸ್ವದೇಶದಲ್ಲಿ ನಡೆಯಲಿರುವ ನಿದಾಹಸ್ ಟ್ರೋಫಿ ಟ್ವೆಂಟಿ-20 ಟೂರ್ನಮೆಂಟ್‌ನಿಂದ ಹೊರಗುಳಿದಿದ್ದಾರೆ.
ಜನವರಿಯಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಏಕದಿನ ಹಾಗೂ ಟ್ವೆಂಟಿ-20 ನಾಯಕನಾಗಿ ಆಯ್ಕೆಯಾದ ಬಳಿಕ ಮ್ಯಾಥ್ಯೂಸ್ ಕೇವಲ 1 ಪಂದ್ಯ ಆಡಿದ್ದಾರೆ. ಮ್ಯಾಥ್ಯೂಸ್ ಮುಂದಿನ ವಾರ ಆರಂಭವಾಗಲಿರುವ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಭಾಗವಹಿಸುತ್ತಿರುವ ತ್ರಿಕೋನ ಸರಣಿಯಿಂದ ದೂರ ಉಳಿಯಲಿದ್ದಾರೆ.
ಮ್ಯಾಥ್ಯೂಸ್ ಅನುಪಸ್ಥಿತಿಯಲ್ಲಿ ಟೆಸ್ಟ್ ನಾಯಕ ದಿನೇಶ್ ಚಾಂಡಿಮಾಲ್ ತ್ರಿಕೋನ ಸರಣಿಯಲ್ಲಿ ತಂಡವನ್ನು ಮುನ್ನಡೆಸುವ ನಿರೀಕ್ಷೆಯಿದೆ ಎಂದು ಇಎಸ್‌ಪಿಎನ್ ವರದಿ ಮಾಡಿದೆ.