ಮುಶ್ಫಿಕುರ್ರಹೀಮ್ ಸಾಹಸ; ಬಾಂಗ್ಲಾಕ್ಕೆ ಜಯ

Update: 2018-03-10 17:55 GMT

  ಕೊಲಂಬೊ, ಮಾ.10: ಶ್ರೀಲಂಕಾ ವಿರುದ್ಧದ ತ್ರಿಕೋನ ಟ್ವೆಂಟಿ-20 ಸರಣಿಯ ಪಂದ್ಯದಲ್ಲಿ ಶನಿವಾರ ಬಾಂಗ್ಲಾದೇಶ ತಂಡ 5 ವಿಕೆಟ್‌ಗಳ ಜಯ ಗಳಿಸಿದೆ.

ಗೆಲುವಿಗೆ 215 ರನ್‌ಗಳ ಕಠಿಣ ಸವಾಲು ಪಡೆದ ಬಾಂಗ್ಲಾ ತಂಡ ಇನ್ನೂ 2 ಎಸೆತಗಳು ಬಾಕಿ ಇರುವಾಗಲೇ 5 ವಿಕೆಟ್ ನಷ್ಟದಲ್ಲಿ ಅಗತ್ಯದ ರನ್ ಗಳಿಸಿ ಗೆಲುವಿನ ದಡ ಸೇರಿತು.

  ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮುಶ್ಫಿಕುರ್ರಹೀಮ್ ಔಟಾಗದೆ 72 ರನ್(35ಎ, 5ಬೌ,4ಸಿ) ಗಳಿಸಿ ತಂಡದ ಗೆಲುವಿಗೆ ನೆರವಾದರು.

 ಆರಂಭಿಕ ದಾಂಡಿಗರಾದ ತಮೀಮ್ ಇಕ್ಬಾಲ್ 47 ರನ್ ಮತ್ತು ಲಿಟನ್ ದಾಸ್ 43ರನ್, ಸೌಮ್ಯ ಸರ್ಕಾರ್ 24 ರನ್, ನಾಯಕ ಮಹ್ಮುದುಲ್ಲಾ 20 ರನ್‌ಗಳ ಕೊಡುಗೆ ನೀಡಿದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಶ್ರೀಲಂಕಾ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 214 ರನ್ ಗಳಿಸಿತ್ತು. ಲಂಕಾದ ಕುಸಾಲ್ ಮೆಂಡಿಸ್ 57 ರನ್, ಕುಸಾಲ್ ಪೆರೇರಾ 74ರನ್, ಗುಣತಿಲಕ 26ರನ್, ತರಂಗ ಔಟಾಗದೆ 32 ರನ್ ಗಳಿಸಿದರು. ಸಂಕ್ಷಿಪ್ತ ಸ್ಕೋರ್ ವಿವರ

ಶ್ರೀಲಂಕಾ 20 ಓವರ್‌ಗಳಲ್ಲಿ 214/6( ಪೆರೇರಾ 74, ಮೆಂಡಿಸ್ 57; ಮುಸ್ತಾಫಿರ್ರುಹ್ಮಾನ್ 48ಕ್ಕೆ 3, ಮಹ್ಮುದುಲ್ಲಾ 15ಕ್ಕೆ 2).

ಬಾಂಗ್ಲಾದೇಶ ತಂಡ 19.4 ಓವರ್‌ಗಳಲ್ಲಿ 215/5( ಮುಶ್ಫಿಕುರ್ರಹೀಮ್ ಔಟಾಗದೆ 72 ,ತಮೀಮ್ ಇಕ್ಬಾಲ್ 47 , ಲಿಟನ್ ದಾಸ್ 43; ಫೆರ್ನಾಂಡೊ 37ಕ್ಕೆ 2).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News