ಶಿಖರ ಏರಿದ ಮಹಿಳಾ ಸೇನಾಧಿಕಾರಿಗೆ ಕಾದಿತ್ತು ಭಾರೀ ಅಚ್ಚರಿ

Update: 2018-03-11 14:08 GMT
ಸಾಂದರ್ಭಿಕ ಚಿತ್ರ

ಇಟಾನಗರ,ಮಾ.11: ಅರುಣಾಚಲ ಪ್ರದೇಶದ ಟೆಂಗಾ ಸೇನಾ ಶಿಬಿರಕ್ಕೆ ನಿಯೋಜನೆಗೊಂಡ ಮಹಿಳಾ ಲೆಫ್ಟಿನೆಂಟ್ ತಮ್ಮ ಪ್ರದೇಶದ ಪರಿಚಯ ಪ್ರವಾಸದಲ್ಲಿ ಟ್ವಾಂಗ್ ವಲಯದ ಕ್ಯಾ ಫೋ ಶಿಖರವೇರಿದಾಗ ಅಚ್ಚರಿಗೊಳಗಾದ ಘಟನೆ ನಡೆದಿದೆ. ಭಾರತ- ಚೀನಾ ಗಡಿಭಾಗಕ್ಕೆ ನಿಟಕವಾಗಿರುವ ಕ್ಯಾ ಫೋ ಪ್ರದೇಶವನ್ನು ಆಶೀಶ್ ಟಾಪ್ ಎಂದು ಕರೆಯಲಗುತ್ತದೆ. ಈ ಹೆಸರಿನ ಮೂಲವನ್ನು ತಿಳಿಯಲು ಈ ಯುವ ಅಧಿಕಾರಿಣಿ ಮುಂದಾದಾಗ ತಿಳಿದ ವಿಷಯದಿಂದ ನಿಬ್ಬೆರಗಾದರು.

ಈ ಪೋಸ್ಟ್ ಗೆ ತನ್ನ ತಂದೆ ಆಶೀಶ್ ದಾಸ್ ಹೆಸರು ಇಟ್ಟಿರುವುದು ಈಕೆಗೆ ತಿಳಿದುಬಂತು. ಅಸ್ಸಾಂ ರೆಜಿಮೆಂಟ್‍ನಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸಿ ಇವರು ನಿವೃತ್ತರಾಗಿದ್ದರು. ಇದು ಪತ್ತೆಯಾದ ತಕ್ಷಣ ತಂದೆಗೆ ಕರೆ ಮಾಡಿ ಈ ಸಂತಸವನ್ನು ಹಂಚಿಕೊಂಡರು.

"ಆಶೀಶ್‍ಟಾಪ್‍ನ ಕಮಾಂಡಿಂಗ್ ಆಫೀಸರ್‍ನಿಂದ ಕರೆ ಬಂದಾಗ ನಾನು ಮನೆಯಲ್ಲಿದ್ದೆ. ತನ್ನನ್ನು ಪರಿಚಯಿಸಿಕೊಂಡ ಆತ ಆಶೀಶ್ ಟಾಪ್ ಹೆಸರನ್ನು ಕಂಡು ಮಗಳು ಎಷ್ಟು ಖುಷಿಗೊಂಡರು ಎನ್ನುವುದನ್ನು ಆತ ವಿವರಿಸಿದ" ಎಂದು ಆಶೀಶ್ ಹೇಳಿದರು.

"ಈ ವಿಭಾಗದಲ್ಲಿ ನಾನು 1986ರಲ್ಲಿದ್ದಾಗ ಕುಟುಂಬಕ್ಕೆ ಇದನ್ನು ಹೇಳಿರಬಹುದು. ಆದರೆ ಆಗ ನನ್ನ ಮಗಳು ಹುಟ್ಟಿರಲೂ ಇಲ್ಲ. ನನಗೂ ಈ ವಿಷಯ ಗೊತ್ತಾದದ್ದು 2003ರಲ್ಲಿ. ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯನ್ನು ಹಿಮ್ಮೆಟ್ಟಿಸಿ, 14 ಸಾವಿರ ಅಡಿಯ ಎತ್ತರದ ಪೋಸ್ಟ್ ವಶಪಡಿಸಿಕೊಂಡ ಪ್ರದೇಶಕ್ಕೆ ನನ್ನ ಹೆಸರು ಇಟ್ಟಿರುವುದು 17 ವರ್ಷ ಬಳಿಕ ನನಗೆ ತಿಳಿದಿತ್ತು ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News