ಆಸ್ಟ್ರೇಲಿಯ ವಿರುದ್ಧ 3ನೇ ಟೆಸ್ಟ್‌ಗೆ ಸ್ಟೇಯ್ನ್ ಅಲಭ್ಯ

Update: 2018-03-16 18:21 GMT

ಜೋಹಾನ್ಸ್‌ಬರ್ಗ್, ಮಾ.16: ಹಿಮ್ಮಡಿ ನೋವಿನಿಂದ ಇನ್ನೂ ಸಂಪೂರ್ಣ ಚೇತರಿಸಿಕೊಳ್ಳದ ದಕ್ಷಿಣ ಆಫ್ರಿಕದ ವೇಗದ ಬೌಲರ್ ಡೇಲ್ ಸ್ಟೇಯ್ನಿ ಆಸ್ಟ್ರೇಲಿಯ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೆ ಲಭ್ಯವಿರುವುದಿಲ್ಲ. ಮೂರನೇ ಟೆಸ್ಟ್ ಮುಂದಿನ ಗುರುವಾರ ಆರಂಭವಾಗಲಿದೆ.

ದೇಶದ ಯಶಸ್ವಿ ಬೌಲರ್ ಎನಿಸಿಕೊಳ್ಳಲು ಇನ್ನು ಮೂರು ವಿಕೆಟ್ ಅಗತ್ಯವಿರುವ ಹಿರಿಯ ವೇಗದ ಬೌಲರ್ ಸ್ಟೇಯ್ನಿ ಜನವರಿಯಲ್ಲಿ ಕೇಪ್‌ಟೌನ್‌ನಲ್ಲಿ ನಡೆದ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಗಾಯಗೊಂಡ ಬಳಿಕ ಕ್ರಿಕೆಟ್‌ಗೆ ವಾಪಸಾಗಿಲ್ಲ.

ನ್ಯೂಲ್ಯಾಂಡ್ಸ್‌ನಲ್ಲಿ ಮುಂದಿನ ವಾರ ಆರಂಭವಾಗಲಿರುವ ಟೆಸ್ಟ್ ಪಂದ್ಯಕ್ಕೆ ಮೊದಲು ಸ್ಟೇಯ್ನೆಗೆ ಚತುರ್ದಿನ ದೇಶೀಯ ಕ್ರಿಕೆಟ್ ಪಂದ್ಯ ಆಡುವ ಅವಕಾಶವಿದ್ದರೂ ಅದನ್ನು ಕೈಚೆಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News