ದೋಷ ಮುಕ್ತಗೊಂಡರೆ ಶಮಿಗೆ ಬಿಸಿಸಿಐ ಕೇಂದ್ರೀಯ ಗುತ್ತಿಗೆ ವಾಪಸ್?

Update: 2018-03-16 18:28 GMT

ಹೊಸದಿಲ್ಲಿ, ಮಾ.16: ಮಂಡಳಿಯ ನೀತಿ ಸಂಹಿತೆಯಂತೆ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕದ(ಎಸಿಯು) ಮುಖ್ಯಸ್ಥ ನೀರಜ್ ಕುಮಾರ್ ಅವರಿಂದ ದೋಷಮುಕ್ತಗೊಂಡರೆ ಮಾತ್ರ ವೇಗದ ಬೌಲರ್ ಮುಹಮ್ಮದ್ ಶಮಿಗೆ ಟೀಮ್ ಇಂಡಿಯಾದ ಕೇಂದ್ರೀಯ ಗುತ್ತಿಗೆ ವಾಪಸ್ ಲಭಿಸುವ ಸಾಧ್ಯತೆಯಿದೆ.

ಶಮಿ ಪತ್ನಿ ಹಸಿನಾ ಜಹಾನ್ ಶಮಿ ವಿರುದ್ಧ ಮಾಡಿರುವ ಕೌಟುಂಬಿಕ ದೌರ್ಜನ್ಯ ಆರೋಪವು ಪೊಲೀಸ್ ತನಿಖಾ ವ್ಯಾಪ್ತಿಗೆ ಬರುತ್ತದೆ. ಈ ವಿಷಯದಲ್ಲಿ ನಾವು ಏನೂ ಮಾಡಲು ಸಾಧ್ಯವಿಲ್ಲ ಎಂದು ಬಿಸಿಸಿಐ ಹೇಳಿದೆ.

 ಶಮಿ ಅವರು ಮುಹಮ್ಮದ್ ಭಾಯ್ ಹಾಗೂ ಅಲಿಶ್ಬಾ ಅವರೊಂದಿಗೆ ಹಣದ ವಿನಿಮಯ ಮಾಡಿಕೊಂಡಿರುವ ಬಗ್ಗೆ ಎಸಿಯು ಕೂಲಂಕಶ ತನಿಖೆ ನಡೆಸಲಿದೆ.ಒಂದು ವೇಳೆ ನೀರಜ್ ಕುಮಾರ್ ಅವರು ಸಲ್ಲಿಸುವ ವರದಿಯಲ್ಲಿ ಶಮಿ ತಪ್ಪು ಮಾಡಿಲ್ಲ ಎಂದು ಸಾಬೀತಾದರೆ ಅವರಿಗೆ ತಕ್ಷಣವೇ ಆಟಗಾರರ ಕೇಂದ್ರೀಯ ಗುತ್ತಿಗೆ ವಾಪಸ್ ನೀಡಲಾಗುತ್ತದೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News