ವನಿತೆಯರ ಟ್ವೆಂಟಿ-20: ಭಾರತಕ್ಕೆ ಸೋಲು

Update: 2018-03-25 18:19 GMT

ಮುಂಬೈ, ಮಾ.25: ಮಹಿಳಾ ಟ್ವೆಂಟಿ-20 ಕ್ರಿಕೆಟ್ ತ್ರಿಕೋನ ಸರಣಿಯಲ್ಲಿ ವೇಗವಾಗಿ ಅರ್ಧಶತಕ ಸಿಡಿಸಿದ ಭಾರತದ ಆಟಗಾರ್ತಿ ಎನಿಸಿಕೊಂಡಿರುವ ಸ್ಮತಿ ಮಂಧಾನ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಆದರೆ, ಭಾರತ ತಂಡ ಈ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 7 ವಿಕೆಟ್‌ಗಳಿಂದ ಸೋತಿದೆ.

ಇಂಗ್ಲೆಂಡ್ ವಿರುದ್ಧ ರವಿವಾರ ನಡೆದ 3ನೇ ಟ್ವೆಂಟಿ-20 ಪಂದ್ಯದಲ್ಲಿ ಭಾರತದ ಇನಿಂಗ್ಸ್ ಆರಂಭಿಸಿದ ಮಂಧಾನ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಹಿಂದೆ ತನ್ನದೇ 30 ಎಸೆತಗಳ ಅರ್ಧಶತಕದ ದಾಖಲೆಯನ್ನು ಮುರಿದರು.

ಭಾರತ ತಂಡ ಮಂಧಾನ (76 ರನ್, 40 ಎಸೆತ,12 ಬೌಂಡರಿ, 2 ಸಿಕ್ಸರ್), ಮಿಥಾಲಿ ರಾಜ್(53, 43 ಎಸೆತ), ಹರ್ಮನ್‌ಪ್ರೀತ್ ಕೌರ್(30,22 ಎಸೆತ)ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತು. ಆದರೆ, ಇಂಗ್ಲೆಂಡ್ ತಂಡ ಡೇನಿಯಲ್ ವ್ಯಾಟ್(124,64 ಎಸೆತ, 15 ಬೌಂಡರಿ, 5 ಸಿಕ್ಸರ್) ಶತಕದ ನೆರವಿನಿಂದ 199 ರನ್ ಗುರಿಯನ್ನು 8 ಎಸೆತಗಳು ಬಾಕಿ ಇರುವಾಗಲೇ ಯಶಸ್ವಿಯಾಗಿ ಬೆನ್ನಟ್ಟಿ ಗೆಲುವಿನ ನಗೆ ಬೀರಿತು.

ಸಂಕ್ಷಿಪ್ತ ಸ್ಕೋರ್

►ಭಾರತ: 20 ಓವರ್‌ಗಳಲ್ಲಿ 198/4

(ಸ್ಮತಿ ಮಂಧಾನ 76, ಮಿಥಾಲಿ ರಾಜ್ 53, ಫರ್ರಂಟ್ 2-32)

►ಇಂಗ್ಲೆಂಡ್: 18.4 ಓವರ್‌ಗಳಲ್ಲಿ 199/3

(ಡೇನಿಯಲ್ ವ್ಯಾಟ್ 124, ದೀಪ್ತಿ ಶರ್ಮ 2-36)


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News