ಅಸಾರಾಮ್ ಬಾಪು ಅತ್ಯಾಚಾರಿಯಲ್ಲ, ಸನಾತನ ಹಿಂದೂ ಧರ್ಮದ ರಕ್ಷಕ

Update: 2018-04-25 15:32 GMT

ಹೊಸದಿಲ್ಲಿ, ಎ.25: ಜೀವಾವಧಿ ಶಿಕ್ಷೆಗೊಳಗಾಗಿರುವ ಅಸಾರಾಮ್ ಬಾಪು ಅತ್ಯಾಚಾರಿಯಲ್ಲ. ಅವರು ಸನಾತನ ಹಿಂದೂ ಧರ್ಮದ ಸಂರಕ್ಷಕರು ಎಂದು ನಕಲಿ ಎನ್ ಕೌಂಟರ್ ಪ್ರಕರಣದ ಆರೋಪಿ ಗುಜರಾತ್ ನ ಮಾಜಿ ಐಪಿಎಸ್ ಅಧಿಕಾರಿ ಡಿ.ಜಿ.ವಂಝಾರ ಹೇಳಿದ್ದಾರೆ.

ತಾನು ಅತ್ಯಾಚಾರಕ್ಕೊಳಗಾಗಿದ್ದೇನೆ ಎಂದು ಸಂತ್ರಸ್ತೆಯು ಎಫ್ ಐಆರ್ ನಲ್ಲಿ ಹೇಳಿರಲಿಲ್ಲ. ಅಸಾರಾಮ್ ರನ್ನು ಅತ್ಯಾಚಾರಿ ಎಂದು ಕರೆಯುವುದು ಸರಿಯಲ್ಲ. ಸಂತ್ರಸ್ತೆಯನ್ನು ಅಸಾರಾಮ್ ಅಸಭ್ಯವಾಗಿ ಸ್ಪಷ್ಟಿಸಲು ಯತ್ನಿಸಿದರು ಎನ್ನುವುದು ಚಾರ್ಜ್ ಶೀಟ್ ನಲ್ಲಿದೆ ಎಂದು ವಂಝಾರ ಹೇಳಿದರು.

ತಾನು ಅಸಾರಾಮ್ ಅನುಯಾಯಿಯಾಗಿದ್ದೇನೆ. ಸಂತ್ರಸ್ರೆ ದಾಖಲಿಸಿರುವ ಎಫ್ ಐಆರ್ ನಲ್ಲಾಗಲೀ, ಚಾರ್ಜ್ ಶೀಟ್ ನಲ್ಲಾಗಲೀ ಆಕೆ ಅತ್ಯಾಚಾರಕ್ಕೊಳಗಾಗಿದ್ದಾಳೆ ಎಂಬುದಿಲ್ಲ. ಆಕೆಯನ್ನು ಅಸಭ್ಯವಾಗಿ ಮುಟ್ಟಲು ಪ್ರಯತ್ನಿಸಲಾಗಿದೆ ಎಂಬುದಷ್ಟೇ ಉಲ್ಲೇಖವಾಗಿದೆ. ವಿಚಾರಣೆಯ ಸಂದರ್ಭವೂ ತಾನು ಅತ್ಯಾಚಾರಕ್ಕೊಳಗಾಗಿದ್ದೇನೆ ಎಂದು ಸಂತ್ರಸ್ತೆ ಹೇಳಿರಲಿಲ್ಲ. ಇದು ಅತ್ಯಾಚಾರ ಪ್ರಕರಣವಾಗಲು ಸಾಧ್ಯವೇ ಇಲ್ಲ” ಎಂದು ವಂಝಾರ ಹೇಳಿದ್ದಾರೆ.

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪುಗೆ ಜೋಧ್‌ಪುರ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಬುಧವಾರ ಆದೇಶ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News