×
Ad

ಸೇನ್‌ಗೆ ಸೋಲು ಪ್ರಣೀತ್‌ಗೆ ಜಯ

Update: 2018-05-03 23:51 IST

ಆಕ್ಲೆಂಡ್, ಮೇ 3: ನ್ಯೂಝಿಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಗುರುವಾರ ಭಾರತದ ಉದಯೋನ್ಮುಖ ಆಟಗಾರ ಲಕ್ಷ ಸೇನ್ ಚೀನಾದ ದಂತಕತೆ ಲಿನ್ ಡಾನ್ ವಿರುದ್ಧ ಸೋತಿದ್ದಾರೆ. ಸಾಯಿ ಪ್ರಣೀತ್ ಹಾಗೂ ಸಮೀರ್ ವರ್ಮ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ. ಗುರುವಾರ 1 ಗಂಟೆ, 7 ನಿಮಿಷಗಳ ಕಾಲ ನಡೆದ ಮ್ಯಾರಥಾನ್ ಸಿಂಗಲ್ಸ್ ಪಂದ್ಯದಲ್ಲಿ 17ರ ಹರೆಯದ ಸೇನ್ 2 ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ಡಾನ್ ವಿರುದ್ಧ 21-15,15-21, 12-21 ಗೇಮ್‌ಗಳಿಂದ ಸೋತಿದ್ದಾರೆ.

ಪ್ರಣೀತ್ ಮಲೇಷ್ಯಾದ ಡರೆನ್ ಲೀವ್‌ರನ್ನು 21-18, 21-7 ಅಂತರದಿಂದಲೂ, ಸಮೀರ್ ವರ್ಮ ಹಾಂಕಾಂಗ್‌ನ ಚೆವುಕ್ ಯಿವು ಲೀ ಅವರನ್ನು 21-17, 21-19 ಅಂತರದಿಂದ ಸೋಲಿಸಿ ಅಂತಿಮ -8ರ ಸ್ಥಾನ ಖಚಿತಪಡಿಸಿಕೊಂಡರು.

ಭಾರತದ ಇನ್ನೋರ್ವ ಆಟಗಾರ ಅಜಯ್ ಜಯರಾಮ್ ಕೊರಿಯಾದ ಕ್ವಾಂಗ್ ಹೀ ವಿರುದ್ಧ 21-15, 20-22, 6-21 ಅಂತರದಿಂದ ಸೋತಿದ್ದಾರೆ.

ಪ್ರಣೀತ್ ಮುಂದಿನ ಸುತ್ತಿನಲ್ಲಿ ಶ್ರೀಲಂಕಾದ ನಿಲುಕಾ ಕರುಣರತ್ನೆ ಹಾಗೂ ವರ್ಮ ಅವರು ಚೀನಾದ ಲಿನ್ ಡಾನ್‌ರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News