ರಾಜಸ್ಥಾನ್ ರಾಯಲ್ಸ್ ಗೆ 15 ರನ್‌ಗಳ ಜಯ
ಜೈಪುರ, ಮೇ 8: ಐಪಿಎಲ್ ಟ್ವೆಂಟಿ-20 ಟೂರ್ನಿಯ 40ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡ 15 ರನ್‌ಗಳ ಜಯ ಗಳಿಸಿದೆ.
ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 159 ರನ್‌ಗಳ ಸವಾಲು ಪಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 143 ರನ್ ಗಳಿಸಿತು.
ಪಂಜಾಬ್ ತಂಡದ ಆರಂಭಿಕ ದಾಂಡಿಗ ಲೋಕೇಶ್ ರಾಹುಲ್ ಏಕಾಂಗಿ ಹೋರಾಟ ನಡೆಸಿ ಅಜೇಯ 95 ರನ್(70ಎ, 11ಬೌ,2ಸಿ) ಗಳಿಸಿದರೂ ತಂಡ ಗೆಲುವಿನ ದಡ ಸೇರಲಿಲ್ಲ.
ರಾಜಸ್ಥಾನ ರಾಯಲ್ಸ್ 158/8: ಟಾಸ್ ಜಯಿಸಿದ ರಾಜಸ್ಥಾನ ರಾಯಲ್ಸ್ ತಂಡ ಬ್ಯಾಟಿಂಗ್ ಆಯ್ದುಕೊಂಡು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 158 ರನ್ ಗಳಿಸಿತ್ತು. ವಿಕೆಟ್ ಕೀಪರ್ ಜೋಸ್ ಬಟ್ಲರ್ 82 ರನ್(58ಎ, 9ಬೌ,1ಸಿ) ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಸಂಜು ಸ್ಯಾಮ್ಸನ್ (22),ಬೆನ್ ಸ್ಟೋಕ್ಸ್ (14), ಸ್ಟುವರ್ಟ್ ಬಿನ್ನಿ (11) ಎರಡಂಕೆಯ ಕೊಡುಗೆ ನೀಡಿದರು.
ಕಿಂಗ್ಸ್ ಇಲೆವೆನ್ ತಂಡದ ಆ್ಯಂಡ್ರೂ ಟೈ 34ಕ್ಕೆ 4 ವಿಕೆಟ್, ಮುಜೀಬ್ ಉರ್ ರಹ್ಮಾನ್ 21ಕ್ಕೆ 2 , ಮಾರ್ಕಸ್ ಸ್ಟೋನಿಸ್ 15ಕ್ಕೆ 1 ವಿಕೆಟ್ ಪಡೆದರು.