ಹಿಮಾಚಲ ಪ್ರದೇಶ: ಬಾವಿಯಲ್ಲಿ ಸತ್ತ ಬಾವಲಿಗಳು ಪತ್ತೆ
ನಹಾನ್ (ಹಿಮಾಚಲಪ್ರದೇಶ), ಮೇ 24: ಕೇರಳದಲ್ಲಿ ನಿಪಾಹ್ ವೈರಸ್ ಸೋಂಕು ಹರಡುತ್ತಿರುವ ನಡುವೆ ನಹಾನ್‌ನಲ್ಲಿರುವ ಸರಕಾರಿ ಶಾಲೆಯ ಆವರಣದಲ್ಲಿ ಬುಧವಾರ 18 ಸತ್ತ ಬಾವಲಿಗಳು ಪತ್ತೆಯಾಗಿವೆ. ಇದರಿಂದ ಸ್ಥಳೀಯರಲ್ಲಿ ಆತಂಕ ಉಂಟಾಗಿದೆ.
ಡೆಪ್ಯುಟಿ ಆಯುಕ್ತರ ನಿರ್ದೇಶನದ ಹಿನ್ನೆಲೆಯಲ್ಲಿ ಬರ್ಮಾ ಪಾಪಾಡಿ ಶಾಲೆಗೆ ಆರೋಗ್ಯ, ಪಶು ಸಂಗೋಪನೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಆಗಮಿಸಿದ್ದಾರೆ ಹಾಗೂ ಪರಿಶೀಲನೆಗೆ ಸತ್ತ ಬಾವಲಿಗಳ ಮಾದರಿ ಕೊಂಡೊಯ್ದಿದ್ದಾರೆ.
ಆದಾಗ್ಯೂ, ನಿಪಾಹ್ ವೈರಸ್ ಸೋಂಕಿನ ವದಂತಿಯನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ. ಬಾವಲಿಗಳು ಪ್ರತಿವರ್ಷ ಇಲ್ಲಿಗೆ ಬರುತ್ತವೆ. ಈ ವರ್ಷ ಭೇಟಿ ನೀಡಿದ ಬಾವಲಿಗಳ ಸಂಖ್ಯೆ ಏರಿಕೆಯಾಗಿತ್ತು ಎಂದು ಜಿಲ್ಲಾ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಸಂಜಯ್ ಶರ್ಮಾ ಹೇಳಿದ್ದಾರೆ.
ಬಾವಲಿಗಳು ಪ್ರತಿ ವರ್ಷ ಇಲ್ಲಿಗೆ ಬರುತ್ತವೆ. ಅವುಗಳಲ್ಲಿ ಕೆಲವು ಆಕಸ್ಮಿಕವಾಗಿ ಸತ್ತಿವೆ. ಆದಾಗ್ಯೂ, ಈ ವರ್ಷ ಆಗಮಿಸಿದ ಬಾವಲಿಗಳ ಸಂಖ್ಯೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಹೆಚ್ಚಾಗಿದೆ ಎಂದು ಶಾಲೆಯ ಪ್ರಾಂಶುಪಾಲರು ಹಾಗೂ ವಿದ್ಯಾರ್ಥಿಗಳು ಹೇಳಿದ್ದಾರೆ.