ನಿಪಾಹ್ ವೈರಸ್: ಕಲ್ಲಿಕೋಟೆ ಮೆಡಿಕಲ್ ಕಾಲೇಜಿನಿಂದ ರೋಗಿಗಳ ಸಾಮೂಹಿಕ ಡಿಸ್ಚಾರ್ಜ್

Update: 2018-05-27 12:07 GMT

ಕಲ್ಲಿಕೋಟೆ, ಮೇ 27: ನಿಪಾಹ್ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ರೋಗಿಗಳಿಗೆ ಚಿಕಿತ್ಸೆಯಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಹೇರಲಾಗಿದೆ. ಸರ್ಜರಿ, ಗೈನಾಕಾಲಜಿ ಮುಂತಾದ ವಾರ್ಡ್‍ಗಳಿಂದ ಹಲವಾರು ಮಂದಿಯನ್ನು ಶನಿವಾರ ಡಿಸ್ಚಾರ್ಜ್ ಮಾಡಲಾಗಿದೆ.

ಗುಣಮುಖರಾಗದವರನ್ನು ಕೂಡಾ ನಿಪಾಹ್ ಗೆ ಹೆದರಿ ಡಿಸ್ಚಾರ್ಜ್ ಮಾಡಲಾಗುತ್ತಿದೆ. ಮಾತೃಶಿಶು ಸಂರಕ್ಷಣಾ ಕೇಂದ್ರದಲ್ಲಿ (ಐಎಂಸಿಎಚ್) ಸಾಮಾನ್ಯ ಹೆರಿಗೆ ಪ್ರಕರಣಗಳನ್ನು ಭರ್ತಿ ಮಾಡಿಕೊಳ್ಳಬಾರದು ಎಂದು ಪ್ರಿನ್ಸಿಪಾಲ್ ಹೆಸರಿನಲ್ಲಿ ಸುತ್ತೋಲೆ ಹೊರಡಿಸಲಾಗಿದೆ. ಮೊದಲು ಶಸ್ತ್ರಕ್ರಿಯೆಗೆ ದಿನಾಂಕ ನಿಗದಿಗೊಳಿಸಿದ ರೋಗಿಗಳನ್ನು ಕೂಡಲೇ ಡಿಸ್ಚಾರ್ಜ್ ಮಾಡಬೇಕು ಅಥವಾ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಮಾಜಿಕ ಆರೋಗ್ಯ ಕ್ಕೆ  ಸ್ಥಳಾಂತರಿಸಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ತುರ್ತುಚಿಕಿತ್ಸೆ ಅಗತ್ಯ ಇರುವ ರೋಗಿಗಳನ್ನು ಮಾತ್ರ ಆಸ್ಪತ್ರೆಯಲ್ಲಿ ಉಳಿಸಿಕೊಂಡರೆ ಸಾಕು ಮತ್ತು ಆಸ್ಪತ್ರೆಯ ನಿರ್ದೇಶಕರು, ಜೂನಿಯರ್ ರೆಸಿಡೆಂಟ್, ಹೌಸ್‍ಸರ್ಜನ್, ಸ್ಟಾಫ್ ನರ್ಸ್ ಮುಂತಾದ ಸಿಬ್ಬಂದಿಗೆ ರಜೆ ಕೊಡಬಾರದೆಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.

ಶುಕ್ರವಾರ ಸಚಿವ ಟಿ.ಪಿ. ರಾಮಕೃಷ್ಣನ್‍ರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಸುತ್ತೋಲೆ ಹೊರಡಿಸಲಾಗಿದೆ. ತುರ್ತು ಅಗತ್ಯದ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರ ರೋಗಿಗಳನ್ನೂ ಪರಿಗಣಿಸಲಾಗುತ್ತಿದೆ ಎಂದು ಸುಪರಿಡೆಂಟ್ ಡಾ. ಕೆ.ಜಿ. ಸುಜೀತ್‍ಕುಮಾರ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News