×
Ad

ಇರ್ಫಾನ್ ಖಾನ್ ಲಂಡನ್ ನಲ್ಲಿ ಕ್ರಿಕೆಟ್ ಪಂದ್ಯ ವೀಕ್ಷಿಸಿದ್ದರೇ ?

Update: 2018-05-30 17:09 IST

ಹೊಸದಿಲ್ಲಿ, ಮೇ 30: ನ್ಯೂರೋ ಎಂಡೋಕ್ರೀನ್ ಟ್ಯೂಮರ್ ಸಮಸ್ಯೆಗೊಳಗಾಗಿ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟ ಇರ್ಫಾನ್ ಖಾನ್ ಅವರು ನಿಖರವಾಗಿ ಎಲ್ಲಿದ್ದಾರೆಂದು ಯಾರಿಗೂ ತಿಳಿದಿಲ್ಲ. ಆದರೆ ಪೀಕು ಚಿತ್ರದ ಈ ನಟ ಲಂಡನ್ ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಹಾಗೂ ಪಾಕಿಸ್ತಾನದ ನಡುವೆ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾಟದ ವೀಕ್ಷಕರ ಗ್ಯಾಲರಿಯಲ್ಲಿದ್ದರು ಎಂದು ಇಂಟರ್ನೆಟ್ ನಂಬಿದೆ.

ಇರ್ಫಾನ್ ಅವರನ್ನೇ ಹೋಲುತ್ತಿರುವ ವ್ಯಕ್ತಿಯೊಬ್ಬ (ಅದು ನಟನೇ ಆಗಿರಬಹುದು) ಮ್ಯಾಚ್ ವೀಕ್ಷಿಸುತ್ತಿರುವ ಫೋಟೋ ಒಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಕೆಲವರು ಇದು ಇರ್ಫಾನ್ ಎಂದೇ ನಂಬಿದ್ದರೆ ಇನ್ನು ಕೆಲವರು ಅದು ಇರ್ಫಾನ್ ಎಂದು ನಂಬಲು ಸಿದ್ಧರಿಲ್ಲ ಹಾಗೂ ಇರ್ಫಾನ್ ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಹೇಳುತ್ತಿದ್ದಾರೆ.

ಅದು ಇರ್ಫಾನ್ ಅವರೇ ಆಗಿದ್ದಾರೆಂದರೆ ಅವರು ಆರೋಗ್ಯದಿಂದಿದ್ದಾರೆಂಬ ಖುಷಿಯಿದೆ ಎಂದು ಒಬ್ಬರು ಹೇಳಿದರೆ ಇನ್ನೊಬ್ಬರು ತಾವು ಇರ್ಫಾನ್ ರನ್ನು ಸ್ಟೇಡಿಯಂನಲ್ಲಿ ತಮ್ಮ ಎದುರಿನ ಸಾಲಿನಲ್ಲಿ ಕುಳಿತಿರುವುದು ನೋಡಿದ್ದಾಗಿ ಹಾಗೂ ಕೆಲವರು ಹತ್ತಿರ ಬಂದು ಫೋಟೋ ಕ್ಲಿಕ್ಕಿಸಲು ಯತ್ನಿಸಿದರೂ ಅವರು ನಿರಾಕರಿಸಿದರು ಎಂದು ಬರೆದಿದ್ದಾರೆ.

ಇರ್ಫಾನ್ ಮತ್ತವರ ಪತ್ನಿ ಸುತಪ ಸಿಕ್ದರ್ ತಾವು ಪಂದ್ಯ ವೀಕ್ಷಿಸಿದ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಏನೂ ಹೇಳಿಲ್ಲವಾದರೂ ತಮ್ಮ ಕೊನೆಯ ಫೇಸ್ ಬುಕ್ ಪೋಸ್ಟ್ ನಲ್ಲಿ ಯಾರಾದರೂ ಲಂಡನ್ ಗೆ ಪ್ರಯಾಣಿಸುವವರಿದ್ದಾರೆಯೇ ಎಂದು ಸುತಪ ಕೇಳಿದ್ದು ಇರ್ಫಾನ್ ಅಲ್ಲಿ ಚಿಕಿತ್ಸೆ ಪಡೆಯುತ್ತಿರಬಹುದು ಎಂದು ಕೆಲವರು ನಂಬಲು ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News