ಸತತ 14ನೇ ದಿನ ತೈಲ ಬೆಲೆ ಇಳಿಕೆ

Update: 2018-06-12 15:13 GMT

ಹೊಸದಿಲ್ಲಿ, ಜೂ.12: ತೈಲ ಬೆಲೆ ಸತತ 14ನೇ ದಿನ ಇಳಿಕೆಯಾಗಿದ್ದು, ನಾಲ್ಕು ಮೆಟ್ರೊ ನಗರಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ 14 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 11 ಪೈಸೆ ಕಡಿಮೆಯಾಗಿದೆ. ಇಂಡಿಯನ್ ಆಯಿಲ್ ಕಾರ್ಪೊರೇಶನ್ ಪ್ರಕಟಣೆಯಂತೆ ದಿಲ್ಲಿಯಲ್ಲಿ ಪ್ರತೀ ಲೀಟರ್‌ಗೆ ಪೆಟ್ರೋಲ್ ದರ 76.43 ರೂ. ಡೀಸೆಲ್ ಬೆಲೆ ರೂ.67.85 ಆಗಿದೆ. ಮುಂಬೈಯಲ್ಲಿ ಕ್ರಮವಾಗಿ ರೂ. 84.26, ರೂ. 72.44, ಕೋಲ್ಕತಾದಲ್ಲಿ ಕ್ರಮವಾಗಿ ರೂ. 79.10, ರೂ.70.40 ಆಗಿದೆ. ಚೆನ್ನೈಯಲ್ಲಿ ಕ್ರಮವಾಗಿ ರೂ. 79.33 ಮತ್ತು 71.62 ಆಗಿದೆ. ತೈಲ ಬೆಲೆಗಳಲ್ಲಿ ಕಳೆದ 14 ದಿನದಲ್ಲಿ ಒಟ್ಟು 1ರೂ. 98 ಪೈಸೆ ಇಳಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News