ರಾಮ್ ದೇವ್ ಫುಡ್ ಪಾರ್ಕ್‌ಗೆ ಭೂಮಿ ಮಂಜೂರು ಯೋಚನೆ ಕೈ ಬಿಟ್ಟ ರಾಜಸ್ಥಾನ ಸರಕಾರ

Update: 2018-06-22 14:47 GMT

ಜೈಪುರ, ಜೂ. 21: ಕರೌಲಿ ಜಿಲ್ಲೆಯಲ್ಲಿ 500 ಕೋ. ರೂ. ಮೊತ್ತದ ಪ್ರಸ್ತಾಪಿತ ಫುಡ್ ಪಾರ್ಕ್‌ಗೆ ಮಂದಿರ್ ಮಾಫಿ ಭೂಮಿ (ಮಾರಾಟ ಮಾಡಲು ಸಾಧ್ಯವಾಗದ ಅಥವಾ ವಾಣಿಜ್ಯ, ಕೃಷಿ ಉದ್ದೇಶಕ್ಕಾಗಿ ಪರಿವರ್ತಿಸಲಾಗದ ಭೂಮಿ) ಯನ್ನು ಯೋಗ ಗುರು ರಾಮ್ ದೇವ್ ಅವರಿಗೆ ಮಂಜೂರು ಮಾಡುವ ಚಿಂತನೆಯನ್ನು ರಾಜಸ್ಥಾನ ಸರಕಾರ ಕೈಬಿಟ್ಟಿದೆ.

ಫುಡ್ ಪಾರ್ಕ್, ಗುರುಕುಲ, ಯೋಗಪೀಠ, ಆಯುರ್ವೇದ ಆಸ್ಪತ್ರೆ, ಆಯುರ್ವೇದಿಕ್ ಔಷಧ ಉತ್ಪಾದನ ಕೇಂದ್ರ ಹಾಗೂ ಗೋಶಾಲೆಗಳನ್ನು ಒಳಗೊಂಡಿರುವ ಹಾಗೂ ಕರೋಲಿ ಗ್ರಾಮದಲ್ಲಿ 401 ಬಿಘಾ ಹರಡಿಕೊಂಡಿರುವ ಮೆಘಾ ಯೋಜನೆ ಇದಾಗಿದೆ. ಗೋವಿಂದ ದೇವ್‌ಜಿ ಟ್ರಸ್ಟ್ ಹಾಗೂ ಪತಂಜಲಿ ಟ್ರಸ್ಟ್ ನಡುವಿನ ಒಪ್ಪಂದ ರದ್ದುಗೊಳಿಸಲಾಗಿದೆ ಎಂದು ರಾಜ್ಯದ ದೇವಸ್ಥಾನ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ನಿಯಮದ ಪ್ರಕಾರ ಪತಂಜಲಿ ಟ್ರಸ್ಟ್ ಮಂದಿರ ಮಾಫಿ ಭೂಮಿಯಲ್ಲಿ ನಿರ್ಮಾಣ ನಡೆಸಲು ಸಾಧ್ಯವಿಲ್ಲ. ಈ ಭೂಮಿಯಲ್ಲಿ ತೋಟಗಾರಿಕೆಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News