ಅಪರಾಧ ಪ್ರಕರಣಗಳ ಭೇದಿಸಲು ಪೊಲೀಸರೊಂದಿಗೆ ಆಧಾರ್ ದತ್ತಾಂಶ ವಿನಿಮಯ

Update: 2018-06-22 14:48 GMT

ಹೈದರಾಬಾದ್, ಜೂ. 22: ವ್ಯಕ್ತಿ ಮೊದಲ ಬಾರಿಗೆ ಭಾಗಿಯಾದ ಪ್ರಕರಣವನ್ನು ಭೇದಿಸಲು ಹಾಗೂ ಅನಾಥ ಶವಗಳನ್ನು ಗುರುತಿಸುವ ಉದ್ದೇಶದಿಂದ ಆಧಾರ್ ದತ್ತಾಂಶವನ್ನು ಪೊಲೀಸರೊಂದಿಗೆ ಹಂಚಿಕೊಳ್ಳುವ ಮನವಿಯನ್ನು ಕೇಂದ್ರ ಸರಕಾರ ಪರಿಶೀಲಿಸಲಿದೆ ಎಂದು ಕೇಂದ್ರದ ಸಹಾಯಕ ಸಚಿವ ಹಂಸರಾಜ್ ಅಹಿರ್ ಗುರುವಾರ ಹೇಳಿದ್ದಾರೆ.

ಆಧಾರ್ ಮಾಹಿತಿಗಳ ಹಂಚಿಕೆಗೆ ಅವಕಾಶ ಹಾಗೂ ಕೈದಿಗಳ ಗುರುತು ಕಾಯ್ದೆಗೆ ತಿದ್ದುಪಡಿ ಸಲಹೆ ಬಗ್ಗೆ ಸಚಿವಾಲಯದಲ್ಲಿ ಚರ್ಚೆ ನಡೆಸಲಾಗುವುದು ಎಂದು ಹೈದರಾಬಾದ್‌ನಲ್ಲಿ ನಡೆದ ಬೆರಳಚ್ಚು ಬ್ಯೂರೊದ ನಿರ್ದೇಶಕರ 19ನೇ ಅಖಿಲ ಭಾರತ ಸಮಾವೇಶದಲ್ಲಿ ಹೇಳಿದರು.

ಪ್ರಮುಖ ಉದ್ದೇಶಗಳಿಗಾಗಿ ಪೊಲೀಸರಿಗೆ ಅಗತ್ಯ ಇರುವ ಆಧಾರ್ ದತ್ತಾಂಶದ ಸೀಮಿತ ಲಭ್ಯತೆ ಇರಬೇಕು ಎಂದು ನ್ಯಾಶನಲ್ ಕ್ರೈಮ್ ರೆಕಾರ್ಡ್ ಬ್ಯುರೊದ ನಿರ್ದೇಶಕ ಇಶಾ ಕುಮಾರ್ ಅವರ ನೀಡಿದ ನಿರ್ದಿಷ್ಟ ಸಲಹೆಗೆ ಸಚಿವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಸರಕಾರ ಬೆರಳಚ್ಚು ಬ್ಯೂರೊವನ್ನು ಆಧುನಿಕೀಕರಣಗೊಳಿಸವುದರೊಂದಿಗೆ ದತ್ತಾಂಶ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದು ಅಹಿರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News