ಉತ್ತರ ಪ್ರದೇಶ: ರಾಷ್ಟ್ರೀಯ ಹೆದ್ದಾರಿಯ ಮಧ್ಯೆಯೇ ಮಾವಿನ ಮರ!
Update: 2018-07-04 16:07 IST
ಲಕ್ನೋ, ಜು.4: ಉತ್ತರ ಪ್ರದೇಶದ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿ ಆದಿತ್ಯನಾಥ್ ಸರಕಾರದ ವಿರುದ್ಧ ವಾಗ್ದಾಳಿ ನಡೆಸಲು ರಾಷ್ಟ್ರೀಯ ಹೆದ್ದಾರಿಯ ನಡುವೆ ಇರುವ ಮಾವಿನ ಮರವೊಂದು ವಿಪಕ್ಷಗಳಿಗೆ ಹೊಸ ಅಸ್ತ್ರವಾಗಿದೆ.
"ಮೈಗಲ್ಗನಿ ಸಮೀಪದ ರಾಷ್ಟ್ರೀಯ ಹೆದ್ದಾರಿ 24ರ ಬಳಿ ಅಭಿವೃದ್ಧಿಯಾಗಿದೆ" ಎಂದು ಬರೆದು ರಾ.ಹೆದ್ದಾರಿ ಮಧ್ಯದಲ್ಲಿ ಮಾವಿನ ಮರ ಇರುವ ಫೋಟೊವನ್ನು ಸಮಾಜವಾದಿ ಪಕ್ಷದ ನಾಯಕ ಶಶಾಂಕ್ ಯಾದವ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
"ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ರಸ್ತೆ ಮಧ್ಯೆ ಇರುವ ದೊಡ್ಡ ಮಾವಿನಮರವೊಂದನ್ನು ನೋಡಿ ಆಶ್ಚರ್ಯಗೊಂಡೆ. ರಾತ್ರಿ ವೇಳೆ ಸಂಚರಿಸುವ ಪ್ರಯಾಣಿಕರಿಗೆ ದೊಡ್ಡ ಅಪಾಯವಾಗಿದೆ" ಎಂದವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. "ಇಲ್ಲಿನ ಎಲ್ಲಾ ಸಂಸದರು ಹಾಗು ಶಾಸಕರು ಆಡಳಿತ ಪಕ್ಷದವರೇ ಆಗಿದ್ದಾರೆ. ಆದರೆ ಯಾರೊಬ್ಬರಿಗೂ ಈ ವಿಚಾರ ತಿಳಿದಿಲ್ಲ" ಎಂದವರು ಹೇಳಿದ್ದಾರೆ.
ಫೋಟೊ ಕೃಪೆ: hindustantimes.com