ಜಾರ್ಖಂಡ್: ನಕ್ಸಲ್ ಕಾರ್ಯಾಚರಣೆ ಸಂದರ್ಭ ಸಿಆರ್‌ಪಿಎಫ್ ಯೋಧನ ಮೃತ್ಯು
Update: 2018-07-11 20:08 IST
ರಾಂಚಿ, ಜು.11: ಜಾರ್ಖಂಡ್‌ನ ಪೂರ್ವ ಸಿಂಘ್‌ಭುಮ್ ಜಿಲ್ಲೆಯ ದಟ್ಟಾರಣ್ಯದಲ್ಲಿ ನಕ್ಸಲರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಸಿಆರ್‌ಪಿಎಫ್ ಯೋಧ ಮೃತಪಟ್ಟಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಪೊಲೀಸರ ತಂಡ ಹಾಗೂ ಸಿಆರ್‌ಪಿಎಫ್ ತಂಡವು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ ಸಂದರ್ಭ ನಕ್ಸಲರು ಗುಂಡಿನ ದಾಳಿ ನಡೆಸಿದಾಗ ಸಿಆರ್‌ಪಿಎಫ್‌ನ 193ನೇ ಬಟಾಲಿಯನ್‌ನ ಯೋಧ ಮೃತಪಟ್ಟಿದ್ದಾರೆ . ಸಿಆರ್‌ಪಿಎಫ್ ಪಡೆಗಳು ಪ್ರತಿದಾಳಿ ನಡೆಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.