×
Ad

ಕಾರ್ಪೊರೇಟ್‌ಗೆ ಜಮೀನು ಒತ್ತುವರಿ ವಿರುದ್ಧ ಹೋರಾಡಿದ ಕಾರಣ ಹಲ್ಲೆ: ಸ್ವಾಮಿ ಅಗ್ನಿವೇಶ್

Update: 2018-07-24 23:45 IST

ಹೊಸದಿಲ್ಲಿ, ಜು.24: ಕಾರ್ಪೊರೇಟ್ ಗುಂಪಿಗಾಗಿ ರಾಜ್ಯ ಸರಕಾರವು ಜಮೀನು ಒತ್ತುವರಿ ಮಾಡುವುದನ್ನು ವಿರೋಧಿಸಿ ಬುಡಕಟ್ಟು ಜನರು ನಡೆಸುತ್ತಿದ್ದ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಕಾರಣಕ್ಕೆ ಜಾರ್ಖಂಡ್‌ನಲ್ಲಿ ನನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಮತ್ತು ಬಂದುವಾ ಮುಕ್ತಿ ಮೋರ್ಚಾದ ನಾಯಕ ಸ್ವಾಮಿ ಅಗ್ನಿವೇಶ್ ಮಂಗಳವಾರ ತಿಳಿಸಿದ್ದಾರೆ. ಜಾರ್ಖಂಡ್‌ನ ಪುಕುರ್‌ನಲ್ಲಿ ನನ್ನ ಮೇಲೆ ನಡೆದ ಹಲ್ಲೆ ಮತ್ತು ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಲ್ಲೆಗಳಲ್ಲಿ ಸಾಮ್ಯತೆಯಿದ್ದು ಇದು ಸರಕಾರಿ ಪ್ರಾಯೋಜಿತವಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News