ಐಎನ್‌ಎಕ್ಸ್ ಮೀಡಿಯಾ ಪ್ರಕರಣ: ಚಿದಂಬರಂಗೆ ಬಂಧನದಿಂದ ಮಧ್ಯಂತರ ರಕ್ಷಣೆ

Update: 2018-07-25 15:55 GMT

ಹೊಸದಿಲ್ಲಿ, ಜು. 25: ಐಎನ್‌ಎಕ್ಸ್ ಮೀಡಿಯಾಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರನ್ನು ಜಾರಿ ನಿರ್ದೇಶನಾಲಯ ಆಗಸ್ಟ್ 1ರ ವರೆಗೆ ಬಂಧಿಸದಂತೆ ದಿಲ್ಲಿ ಉಚ್ಚ ನ್ಯಾಯಾಲಯ ಬುಧವಾರ ಮಧ್ಯಾಂತರ ರಕ್ಷಣೆ ನೀಡಿದೆ. ನ್ಯಾಯಮೂರ್ತಿ ಕೆ. ಪಾಠಕ್ ನೀಡಿ ಮಧ್ಯಂತರ ಪರಿಹಾರದಲ್ಲಿ ಜಾರಿ ನಿರ್ದೇಶನಾಲಯಕ್ಕೆ ಯಾವಾಗ ಬೇಕೋ ಆಗ ಸಹಕರಿಸುವಂತೆ ನಿರ್ದೇಶಿಸಿದೆ. ಅಲ್ಲದೆ ನ್ಯಾಯಾಲಯದ ಅನುಮತಿ ಇಲ್ಲದೆ ದೇಶ ತ್ಯಜಿಸದಂತೆ ಸೂಚಿಸಿದೆ. ತಾನು ಬಂಧನಕ್ಕೆ ಒಳಗಾಗಲಿದ್ದೇನೆ ಎಂದು ಹೇಳಿದ ಚಿದಂಬರಂ ಅವರ ಮನವಿಯ ಬಗ್ಗೆ ಜಾರಿ ನಿರ್ದೇಶನಾಲಯದ ಪ್ರತಿಕ್ರಿಯೆಯನ್ನು ನ್ಯಾಯಾಲಯ ಕೇಳಿತು. ಜಾರಿ ನಿರ್ದೇಶನಾಲಯದ ಹಾಗೂ ಸಿಬಿಐ ದಾಖಲಿಸಿದ ಐಎನ್‌ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿ ನಿರೀಕ್ಷಣಾ ಜಾಮೀನು ಕೋರಿ ಚಿದಂಬರಂ ಸಲ್ಲಿಸಿದ ಮನವಿಯನ್ನು ಆಗಸ್ಟ್ 1ರಂದು ವಿಚಾರಣೆ ನಡೆಸಲಿರುವುದರಿಂದ ಅಲ್ಲಿ ವರೆಗೆ ಯಾವುದೇ ಬಲವಂತದ ಕ್ರಮಗಳನ್ನು ಕೈಗೊಳ್ಳಬೇಡಿ ಎಂದು ನ್ಯಾಯಾಲಯ ಜಾರಿ ನಿರ್ದೇಶನಾಲಯಕ್ಕೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News