ಎಸೆಕ್ಸ್ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಧವನ್ ಶೂನ್ಯ
Update: 2018-07-25 23:40 IST
ಚೆಲ್ಮ್‌ಸ್‌ಪೋರ್ಡ್, ಜು.25: ಎಸೆಕ್ಸ್ ವಿರುದ್ಧದ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಭಾರತದ ಆರಂಭಿಕ ದಾಂಡಿಗ ಶಿಖರ್ ಧವನ್ ಶೂನ್ಯಕ್ಕೆ ಔಟಾದರು.
ಟಾಸ್ ಜಯಿಸಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡರು.
ಮ್ಯಾಟ್ ಕೊಲೆಸ್ ಅವರ ಮೊದಲ ಎಸೆತದಲ್ಲಿ ಜೆ ಫೋಸ್ಟೆರ್ ಅವರಿಗೆ ಕ್ಯಾಚ್ ನೀಡುವುದರ ಮೂಲಕ ನಿರ್ಗಮಿಸಿದರು. ತೆರವಾದ ಸ್ಥಾನಕ್ಕೆ ಆಗಮಿಸಿದ ಚೇತೇಶ್ವರ ಪೂಜಾರ(1) ಬೇಗನೇ ಪೆವಿಲಿಯನ್ ಹಾದಿ ಹಿಡಿದರು.
ಆರಂಭಿಕ ದಾಂಡಿಗ ಮುರಳಿ ವಿಜಯ್ ಮತ್ತು ನಾಯಕ ವಿರಾಟ್ ಕೊಹ್ಲಿ ಅರ್ಧಶತಕಗಳನ್ನು ದಾಖಲಿಸಿದರು. ಕೊಹ್ಲಿ 93 ಎಸೆತಗಳಲ್ಲಿ 12 ಬೌಂಡರಿಗಳ ನೆರವಿನಲ್ಲಿ 68 ರನ್, ವಿಜಯ್ 113 ಎಸೆತಗಳಲ್ಲಿ 7 ಬೌಂಡರಿಗಳ ಸಹಾಯದಿಂದ 53 ರನ್ ಗಳಿಸಿದರು. ಅಜಿಂಕ್ಯ ರಹಾನೆ (17) ಎರಡಂಕೆಯ ಸ್ಕೋರ್ ದಾಖಲಿಸಿ ಔಟಾದರು. ಚಹಾ ವಿರಾಮದ ವೇಳೆಗೆ ವಿಕೆಟ್ ಕೀಪರ್ ಲೋಕೇಶ್ ರಾಹುಲ್ ಔಟಾಗದೆ 37 ರನ್ ಮತ್ತು ದಿನೇಶ್ ಕಾರ್ತಿಕ್ ಔಟಾಗದೆ 19 ರನ್ ಗಳಿಸಿ ಕ್ರೀಸ್‌ನಲ್ಲಿ ಆಡುತ್ತಿದ್ದಾರೆ.