‘ತ್ರಿ ಈಡಿಯಟ್ಸ್‌’ನ ಫುನ್ಸುಕ್ ವಾಂಗ್ಡುಗೆ ಮ್ಯಾಗ್ಸಸೆ ಪುರಸ್ಕಾರ

Update: 2018-07-26 17:46 GMT

ಮುಂಬೈ, ಜು. 26: ‘ತ್ರಿ ಈಡಿಯಟ್ಸ್’ ಚಿತ್ರದ ಫುನ್ಸುಕ್ ವಾಂಗ್ಡು ಅವರನ್ನು ಬಾಲಿವುಡ್ ಅಭಿಮಾನಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. ಚಿತ್ರದಲ್ಲಿ ವಾಂಗ್ಡು ಬೋಧಿಸುವ ಪ್ರಾಯೋಗಿಕ ರೀತಿಯ ಕಲಿಕೆ ಅನನ್ಯ. ಇದು ಎಲ್ಲರ ಮನಸ್ಸುಗಳನ್ನು ಗೆದ್ದಿತ್ತು. ಅಂತಹ ಫುನ್ಸುಕ್ ವಾಂಗ್ಡು ಪಾತ್ರಕ್ಕೆ ಪ್ರೇರಣೆಯಾಗಿದ್ದ ಸೋನಮ್ ವಾಂಗ್ಚುಕ್‌ಗೆ ರೇಮನ್ ಮ್ಯಾಗ್ಸಸೆ ಪ್ರಶಸ್ತಿ ಒಲಿದು ಬಂದಿದೆ. ಸೋನಮ್ ವಾಂಗ್ಚುಕ್ ಲಡಾಕಿ ಇಂಜಿನಿಯರ್ ಹಾಗೂ ಸಂಶೋಧಕ. ಅಲ್ಲದೆ ಶಿಕ್ಷಣ ಸುಧಾರಕ. ಮ್ಯಾಗ್ಸಸೆ ಪ್ರಶಸ್ತಿಯನ್ನು ಏಶ್ಯಾದ ನೋಬೆಲ್ ಪ್ರಶಸ್ತಿ ಎಂದು ಪರಿಗಣಿಸಲಾಗಿದೆ.

ಉತ್ತರ ಭಾರತದ ಕುಗ್ರಾಮಗಳಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ವಿಶಿಷ್ಟ ವ್ಯವಸ್ಥಿತ, ಸಹಯೋಗ ಹಾಗೂ ಸಮುದಾಯ ಕೇಂದ್ರಿತ ಸುಧಾರಣೆಗಳ ಮೂಲಕ ಉತ್ತರ ಭಾರತದ ಯುವಕರಿಗೆ ಜೀವನದಲ್ಲಿ ಹೆಚ್ಚಿನ ಅವಕಾಶಗಳನ್ನು ಒದಗುವಂತೆ ಮಾಡಿದ ಕಾರಣಕ್ಕೆ ವಾಂಗ್ಚುಕ್ ಅವರು ಗುರುತಿಸಲ್ಪಡುತ್ತಾರೆ. ವಿಜ್ಞಾನ ಹಾಗೂ ಸಾಂಸ್ಕೃತಿಕ ಕ್ರಿಯಾಶೀಲತೆಯ ಮೂಲಕ ಆರ್ಥಿಕ ಅಭಿವೃದ್ಧಿ ಪಡೆಯಲು ಸ್ಥಳೀಯ ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ನಿರ್ಣಾಯಕವಾಗಿ ಭಾಗಿಯಾಗಿದ್ದು, ಜಗತ್ತಿನಾದ್ಯಂತ ಎಲ್ಲಾ ಸಮುದಾಯಗಳ ಜನರಿಗೆ ಆದರ್ಶಪ್ರಾಯರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News