ನಿವೃತ್ತ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರ ಅಕ್ರಮ ನಿರ್ಮಾಣ ಕೆಡವಲು ಸುಪ್ರೀಂ ಅನುಮತಿ
ಹೊಸದಿಲ್ಲಿ, ಜು. 30: ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ತನ್ನ ಮನೆಯ ಅಕ್ರಮ ಭಾಗ ಕೆಡಹುವ ವಿರುದ್ಧ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ. ‘‘ಈ ಹಿಂದೆ ನೀವು ನಮ್ಮಲ್ಲಿಗೆ ಬಂದಿರಿ. ನಾವು ನಿಮ್ಮನ್ನು ರಕ್ಷಿಸಿದೆವು.
ಈ ವಿಷಯದ ಬಗ್ಗೆ ಪರಿಶೀಲನೆ ನಡೆಸಿದೆವು. ಮನವಿ ತಿರಸ್ಕರಿಸಿದೆವು’’ ಎಂದು ಹೇಳುವ ಮೂಲಕ ನಿವೃತ್ತ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಮನವಿಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್, ಅವರ ಬಂಗಲೆ ಕೆಡವಲು ಅಹ್ಮದಾಬಾದ್ ನಗರಾಡಳಿತಕ್ಕೆ ಅನುಮತಿ ನೀಡಿದೆ. ಬಂಗಲೆ ಕೆಡಹುವ ವಿರುದ್ಧ ಈ ಹಿಂದೆ ಭಟ್ ಅವರ ಪತ್ನಿ ಸಲ್ಲಿಸಿದ ಮನವಿಯನ್ನು ಗುಜರಾತ್ ಉಚ್ಚ ನ್ಯಾಯಾಲಯ ತಿರಸ್ಕರಿಸಿತ್ತು. ತನ್ನ ನಿವೇಶನದ ಸಮೀಪದಲ್ಲಿರುವ ಸಂಜೀವ ಭಟ್ ಅವರು ಬಂಗ್ಲೆಗೆ ಹೊಂದಿಕೊಂಡ ಅಕ್ರಮ ನಿರ್ಮಾಣ ಕೆಡವಲು ಅನುಮತಿ ನೀಡುವಂತೆ ಕೋರಿ ನೆರೆಯ ಪ್ರವೀಣಚಂದ್ರ ಪಟೇಲ್ ಅವರು 2012ರಲ್ಲಿ ಹೈಕೋರ್ಟ್‌ನ ಮೆಟ್ಟಿಲೇರಿದ್ದರು.